ಭಾರತದಲ್ಲಿ ಲಾಕ್‌ಡೌನ್‌ ವಿಫಲ – ನಾಲ್ಕು ರಾಷ್ಟ್ರಗಳ ಹೋಲಿಕೆ ಮುಂದಿಟ್ಟು ರಾಹುಲ್‌ ಗಾಂಧಿ ಆಕ್ರೋಶ

ಕೊರೋನಾ ತಡೆಗಾಗಿ ಭಾರತದಲ್ಲಿ ಹೇರಲಾಗಿರುವ ಲಾಕ್‌ಡೌನ್‌ ವಿಫಲವಾಗಿದೆ ಎಂದು ವಾದಿಸುತ್ತಲೇ ಬಂದಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಸಮರ್ಥನೆಗಾಗಿ ಲಾಕ್‌ಡೌನ್‌ ಹೇರಿದ ರಾಷ್ಟ್ರಗಳ ಗ್ರಾಫ್‌ಗಳನ್ನು ಹಾಕಿದ್ದಾರೆ.

ಸ್ಪೇನ್‌ ಮಾರ್ಚ್‌ 14ರಂದು ಲಾಕ್‌ಡೌನ್‌ ಘೋಷಿಸಿತ್ತು. ಏಪ್ರಿಲ್‌ 28ರಂದು ಲಾಕ್‌ಡೌನ್‌ ತೆಗೆಯಿತು. ಆನ್‌ಲಾಕ್‌ ಬಳಿಕ ಸ್ಪೇನ್‌ನಲ್ಲಿ ಕೊರೋನಾ ಪ್ರಮಾಣವೂ ಇಳಿದಿದೆ.

ಜರ್ಮನಿಯಲ್ಲಿ ಮಾರ್ಚ್‌ 17ರಂದು ಲಾಕ್‌ಡೌನ್‌ ಹೇರಿ ಏಪ್ರಿಲ್‌ 22ರಂದು ಲಾಕ್‌ಡೌನ್‌ ತೆಗೆಯಲಾಯಿತು. ಲಾಕ್‌ಡೌನ್‌ ಇರುವಾಗ ಏರಿಕೆ ಕಂಡಿದ್ದ ಕೊರೋನಾ ಕೇಸ್‌ ಅನ್‌ಲಾಕ್‌ ಆದ ಬಳಿಕ ಕಡಿಮೆ ಆಗಿದೆ.

ಇಟಲಿಯಲ್ಲಿ ಮಾರ್ಚ್‌ 8ರಂದು ಲಾಕ್‌ಡೌನ್‌ ಘೋಷಣೆ ಆಗಿತ್ತು. ಏಪ್ರಿಲ್‌ 16ರಂದು ಲಾಕ್‌ಡೌನ್‌ ತೆಗೆಯಲಾಯಿತು. ಅನ್‌ಲಾಕ್‌ ಬಳಿಕ ಕೊರೋನಾ ನಿಧಾನಕ್ಕೆ ಇಳಿದಿದೆ.

ಬ್ರಿಟನ್‌ನಲ್ಲಿ ಅತ್ಯಂತ ಕಡಿಮೆ ಕೇಸ್‌ ಇದ್ದಾಗಲೇ ಲಾಕ್‌ಡೌನ್‌ ಘೋಷಣೆ ಆಗಿತ್ತು. ಮಾರ್ಚ್‌ 22ರಂದು ಘೋಷಣೆ ಆಗಿದ್ದ ಲಾಕ್‌ಡೌನ್‌ನ್ನು ಏಪ್ರಿಲ್‌ 12ರಂದು ತೆಗೆಯಲಾಯಿತು. ಬ್ರಿಟನ್‌ನಲ್ಲೂ ಕೊರೋನಾ ಕೇಸ್‌ ಇಳಿದಿದೆ.

ಆದರೆ ಭಾರತದಲ್ಲಿ ಮಾರ್ಚ್‌ 28ರಿಂದ ಲಾಕ್‌ಡೌನ್‌ ಹೇರಿಕೆ ಆದ ಬಳಿಕ ಕೊರೋನಾ ಕೇಸ್‌ ಇಳಿದೇ ಇಲ್ಲ. ಮೇ 30ರಿಂದ ಅನ್‌ಲಾಕ್‌ ಬಳಿಕವೂ ಏರುತ್ತಲೇ ಇದೆ ಎಂದು ರಾಹುಲ್‌ ಗಾಂಧಿ ತಾವು ಮಾಡಿರುವ ಗ್ರಾಫ್‌ ಟ್ವೀಟ್‌ನಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here