ಭಾರತದಲ್ಲಿ ಕೊರೋನಾಗೆ ಔಷಧ ಸಿಕ್ತು..!

ಪ್ರಾತಿನಿಧಿಕ ಚಿತ್ರ

ಕೊರೋನಾ ಸೋಂಕಿತರಿಗೆ ಬಹು ನಿರೀಕ್ಷಿತ ರೆಮ್‌ಡೆಸಿವಿರ್‌ ಔಷಧವನ್ನು ಬಳಸಲು ಭಾರತದ ಅತ್ಯುನ್ನತ ಔಷಧ ನಿಯಂತ್ರಣ ಸಂಸ್ಥೆ ಒಪ್ಪಿಗೆಯನ್ನು ನೀಡಿದೆ. ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ರೆಮ್‌ಡೆಸಿವಿರ್‌ ಬಳಕೆಗೆ ಅನುಮೋದನೆ ನೀಡಿದೆ ಎಂದು ವರದಿ ಆಗಿದೆ.

ಗಂಭೀರ ರೋಗಗಳನ್ನು ಹೊಂದಿರುವ ಕೊರೋನಾ ಸೋಂಕಿತರಿಗೆ ರೆಮ್‌ಡೆಸಿವಿರ್‌ ಬಳಸಬಹುದು ಎಂದು ಸಿಡಿಎಸ್‌ಸಿಒ ಹೇಳಿದೆ. 10 ದಿನಗಳ ಬದಲು ಗರಿಷ್ಠ 5 ದಿನಗಳಿಗೆ ಈ ಔಷಧವನ್ನು ನೀಡುವುದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ವರದಿ ಆಗಿದೆ.

ಈ ಔಷಧವನ್ನು ಅಮೆರಿಕದ ಗಿಲೀಡ್‌ ಸೈನ್ಸ್‌ ತಯಾರಿಸಿದ್ದು ಮುಂಬೈ ಮೂಲದ ಕ್ಲಿನೆರಾ ಗ್ಲೋಬಲ್‌ ಸರ್ವಿಸ್‌ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

10 ದಿನ ರೆಮ್‌ಡೆಸಿವಿರ್‌ ಇಂಜೆಕ್ಷನ್‌ ಬಳಕೆಯಿಂದ ಯಾವುದೇ ಉಪಯೋಗ ಕಂಡುಬಂದಿಲ್ಲ. ಹೀಗಾಗಿ ರೋಗಿಗಳು ಯಾಕೆ ಹೆಚ್ಚುವರಿ ಇಂಜೆಕ್ಷನ್‌ ತೆಗೆದುಕೊಳ್ಳಬೇಕು. ಹೆಚ್ಚುವರಿಯಾಗಿ ಇಂಜೆಕ್ಷನ್‌ ತೆಗೆದುಕೊಂಡರೆ ರೋಗಿಗಳಿಗೆ ಅಡ್ಡಪರಿಣಾಮ ಬೀಳಬಹುದು. ಹೀಗಾಗಿ 5 ದಿನದ ಮಟ್ಟಿಗಷ್ಟೇ ಇಂಜೆಕ್ಷನ್‌ ಬಳಸಲು ಅನುಮತಿ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here