ಭಾರತದಲ್ಲಿ ಅಮೆರಿಕದಷ್ಟು ಟೆಸ್ಟಿಂಗ್‌ ಆಗ್ತಿಲ್ಲ, ಇಲ್ಲದಿದ್ದರೆ ಭಾರತದಲ್ಲಿ ಹೆಚ್ಚು ಕೊರೋನಾ ಕೇಸ್ ಇರುತ್ತಿತ್ತು-‌ ಡೋನಾಲ್ಡ್‌ ಟ್ರಂಪ್‌

ಭಾರತ ಮತ್ತು ಚೀನಾ ಅಧಿಕ ಕೊರೋನಾ ಪರೀಕ್ಷೆ ನಡೆಸಿದ್ದರೆ ಕೊರೋನಾ ಕೇಸ್‌ನಲ್ಲಿ ಎರಡೂ ರಾಷ್ಟ್ರಗಳು ಅಮೆರಿಕವನ್ನು ಮೀರಿಸುತ್ತಿದ್ದವು ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ನಾವು 2 ಕೋಟಿಗೂ ಅಧಿಕ ಮಂದಿಗೆ ಕೊರೋನಾ ಪರೀಕ್ಷೆ ನಡೆಸಿದ್ದೇವೆ. ಇದನ್ನು ನೆನಪಿಡಿ, ನೀವು ಹೆಚ್ಚು ಪರೀಕ್ಷೆ ಮಾಡಿಸಿದಾಗ ಕೊರೋನಾ ಕೇಸ್‌ ಹೆಚ್ಚಾಗುತ್ತದೆ. ನಾವು ಅಧಿಕ ಕೊರೋನಾ ಪರೀಕ್ಷೆ ಮಾಡುತ್ತಿರುವ ಕಾರಣ ನಮ್ಮಲ್ಲಿ ಹೆಚ್ಚು ಕೇಸ್‌ ಪತ್ತೆ ಆಗುತ್ತಿದೆ. ಒಂದು ವೇಳೆ ಚೀನಾ ಮತ್ತು ಭಾರತ ಅಥವಾ ಬೇರೆ ದೇಶಗಳಲ್ಲಿ ಅಧಿಕ ಪರೀಕ್ಷೆ ಮಾಡಿದ್ದರೆ ಆ ದೇಶಗಳಲ್ಲೂ ಹೆಚ್ಚು ಕೊರೋನಾ ಕೇಸ್‌ ಪತ್ತೆ ಆಗುತ್ತಿತ್ತು ಎಂದು ಟ್ರಂಪ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಾವು ಮಾಡಿದ ಭಾಷಣಗಳೆಲ್ಲ ಅಮೆರಿಕ ಸೇರಿದಂತೆ ವಿಶ್ವದ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳೊಂದಿಗೆ ಹೋಲಿಸಿ ಭಾರತದಲ್ಲಿ ಕೊರೋನಾ ಹಬ್ಬುವಿಕೆ ಕಮ್ಮಿ ಆಗಿದೆ ಎಂದು ಹೇಳಿದ್ದರು.

ಕೊರೋನಾ ವೈರಸ್‌ ಚೀನಾದಿಂದ ಬಂದ ಶತ್ರು. ಅವರು ಅದನ್ನು ಅಲ್ಲೇ ತಡೆಯಬೇಕಿತ್ತು. ಆದರೆ ತಡೆಯಲಿಲ್ಲ ಎಂದು ಟ್ರಂಪ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here