ಭಾರತಕ್ಕೆ ಆಕ್ಸಿಜನ್ ಖರೀದಿಸಲು 40 ಲಕ್ಷ ನೀಡಿದ ವೇಗಿ ಬ್ರೆಟ್ ಲೀ

ಆಸ್ಟ್ರೇಲಿಯ ತಂಡದ ಮಾಜಿ ವೇಗಿ ಬ್ರೆಟ್ಲೀ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ 1 ಬಿಟ್ ಕಾಯಿನ್(40 ಲಕ್ಷ ಮೌಲ್ಯ) ದೇಣಿಗೆ ನೀಡಿದ್ದಾರೆ. ಅಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸನ್ ನಿನ್ನೆಯಷ್ಟೇ ಭಾರತದ ಪಿಎಂ ಕೇರ್ಸ್ ಗೆ 37 ಲಕ್ಷ ಹಣವನ್ನು ನೀಡಿದ್ದರು.

“ಭಾರತ ನನಗೆ ಎರಡನೇ ತವರು ಮನೆ ಇದ್ದಂತೆ ನನ್ನ ದೇಶವನ್ನು ಮಾತ್ರವಲ್ಲದೆ ಭಾರತ ದೇಶದ ಕ್ರಿಕೆಟ್ ಲೀಗ್ನಲ್ಲಿಯೂ ಪಾಲ್ಗೊಳ್ಳುವ ಮೂಲಕ ಭಾರತ ದೇಶವನ್ನು ಪ್ರತಿನಿಧಿಸಿದ್ದೇನೆ. ಇದೀಗ ಈ ದೇಶದ ಜನರು ಸಂಕಷ್ಟದಲ್ಲಿದ್ದು, ಇವರಿಗೆ ನೆರವಾಗುವುದು ನನ್ನ ಕರ್ತವ್ಯ”.

ಆಮ್ಲಜನಕದ ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್ಗಳನ್ನು ಖರೀದಿಸಲು 1 ಬಿಟ್ ಕಾಯಿನ್(40 ಲಕ್ಷ) ಅನ್ನು ದೇಣಿಗೆಯನ್ನಾಗಿ ನೀಡುತ್ತಿದ್ದೇನೆ. ಭಾರತ ಈ ಸಂಕಷ್ಟದಿಂದ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಇದಕ್ಕಾಗಿ ಜನರು ದಯವಿಟ್ಟು ಮನೆಯಲ್ಲೇ ಉಳಿಯಿರಿ, ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಸಂಕಟದಲ್ಲಿದ್ದವರಿಗೆ ನೆರವಾಗಿ ಎಂದು ಬ್ರೆಟ್ಲೀ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ತಾವು ಭಾರತಕ್ಕೆ ಸಹಾಯ ಮಾಡಲು ಕಾರಣವಾದ ಪ್ಯಾಟ್ ಕಮಿನ್ಸ್ ಅವರಿಗೂ ಧನ್ಯವಾದ ಹೇಳಿದ್ದಾರೆ.

LEAVE A REPLY

Please enter your comment!
Please enter your name here