ಭಾನುವಾರ ಮದುವೆ ಸಮಾರಂಭಕ್ಕೆ ಅನುಮತಿ – ರಾಜ್ಯ ಸರ್ಕಾರದಿಂದ ಆದೇಶ

ಇನ್ಮುಂದೆ ಪ್ರತಿ ಭಾನುವಾರದಂದು ಇಡೀ ರಾಜ್ಯವೇ ಬಂದ್‌ ಆಗಿರಲಿದೆ. ಸೋಮವಾರ ಹೊಸ ಲಾಕ್‌ಡೌನ್‌ ಮಾರ್ಗಸೂಚಿ ಘೋಷಣೆ ಮಾಡಿದ್ದ ಸಿಎಂ ಯಡಿಯೂರಪ್ಪ ಪ್ರತಿ ಭಾನುವಾರ ಇಡೀ ರಾಜ್ಯದಲ್ಲಿ ಒಂದು ದಿನದ ಬಂದ್‌ನ ಘೋಷಣೆ ಮಾಡಿದ್ದರು.

ಆದರೆ ಈಗ ರಾಜ್ಯ ಸರ್ಕಾರ ಮದುವೆ ಕಾರ್ಯಕ್ರಮಗಳಿಗೆ ವಿನಾಯ್ತಿ ನೀಡಿ ಆದೇಶ ಹೊರಡಿಸಿದೆ.

ಮದುವೆ ಸಮಾರಂಭಗಳು ಈ ಹಿಂದೆಯೇ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಮದುವೆ ಕಾರ್ಯಕ್ರಮಗಳಿಗೆ ಅನುಮತಿ ಕೊಟ್ಟು ರಾಜ್ಯ ಸರ್ಕಾರ ಅದೇಶ ಹೊರಡಿಸಿದೆ.

ಆದರೆ ೫೦ ಮಂದಿಯಷ್ಟೇ ಪಾಲ್ಗೊಳ್ಳಬಹುದು ಮುಂತಾದ ಲಾಕ್‌ಡೌನ್‌ ವೇಳೆ ವಿಧಿಸಲಾಗಿದ್ದ ಹಿಂದಿನ ಷರತ್ತುಗಳು ಯಥಾವತ್ತು ಮುಂದುವರಿಯಲಿದೆ.

LEAVE A REPLY

Please enter your comment!
Please enter your name here