ಭಾನುವಾರ ಕರ್ಫ್ಯೂ ನಡುವೆಯೂ ಮೈಸೂರಿನಲ್ಲಿ ಸರಳ ವಿವಾಹ..!

ಮೈಸೂರು ಜಿಲ್ಲೆಯ ಕೆ.ಜಿ.ಕೊಪ್ಪಲಿನಲ್ಲಿ ಇಂದು ಸರಳ ವಿವಾಹವೊಂದು ನಡೆಯಿತು. ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ  ನಡೆದ ಈ ಸರಳ ವಿವಾಹದಲ್ಲಿ ಪಾಂಡವಪುರದ ಕಾರ್ತಿಕ್ ಹಾಗೂ ಮೈಸೂರಿನ ಕೆ.ಜಿ.ಕೊಪ್ಪಲಿನ ಕೃಪಾ ಜೋಡಿ ಜೀವನ ಸಂಗಾತಿಯಾಗಿದ್ದಾರೆ.

ಕೇವಲ 50 ಮಂದಿ ಮಾತ್ರ ಭಾಗವಹಿಸಬೇಕೆಂಬ ನಿಯಮವನ್ನ ಇಲ್ಲಿ ಪಾಲನೆ ಮಾಡಿದ್ದ ವಧು- ವರರು ಸೇರಿದಂತೆ ಸಂಬಂಧಿಕರೂ ಸಹ ಮುಖಕ್ಕೆ ಮಾಸ್ಕ್‌ ಧರಿಸಿದ್ದರು ಹಾಗೂ ಪ್ರತಿಯೊಬ್ಬರೂ ಸಾಮಾಜಿಕ ಅಂತರವನ್ನ ಕಾಯ್ದು ವಿವಾಹ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಲಾಕ್ ಡೌನ್ ನಡುವೆ ಮೈಸೂರಿನಲ್ಲಿ ನಡೆದ ಈ ಸರಳ ವಿವಾಹ ಇತರರಿಗೂ ಮಾದರಿಯಾಗಿದೆ, ಸ್ನೇಹಿತರು ಹಾಗೂ ದೂರದ ಸಂಬಂಧಿಗಳನ್ನೂ ಕೂಡ ಮದುವೆಗೆ ಆಹ್ವಾನಿಸದೆ ಅತೀ ಸರಳ ವಿವಾಹ ಮಾಡಿ ಕೊರೊನಾ ಲಾಕ್‍ಡೌನ್‍ಗೆ ಬೆಂಬಲ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here