ಭಜ್ಜಿ ಚಾಲೆಂಜ್‌ ಹಾಕಿದ್ದಕ್ಕೆ ಜಂಬೋ ಮಾಡಿದ್ದೇನು ಗೊತ್ತಾ..?

ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮವಾಗಿ ಬಹುತೇಕ ಎಲ್ಲಾ ಕ್ರೀಡಾ ಚಟುವಟಿಕೆಗಳೂ ಸ್ತಬ್ಧಗೊಂಡಿದೆ. ಈ ನಡುವೆ ಭಾರತ ತಂಡದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಕೀಪ್ ಇಟ್ ಅಪ್ ಎಂಬ ಹೊಸ ಚಾಲೆಂಜ್‌ನ್ನು ಶುರು ಮಾಡಿದ್ದಾರೆ.

ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಯುವರಾಜ್ ಸಿಂಗ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಯುವರಾಜ್ ಸಿಂಗ್‌ ಚಾಲೆಂಜ್‌ ಸ್ವೀಕರಿಸಿದ ಹರ್ಭಜನ್‌ ಸಿಂಗ್‌ ಮಾಜಿ ಸ್ಪಿನ್ನರ್‌ ಹಾಗೂ ಟೀಮ್ ಇಂಡಿಯಾ ಮಾಜಿ ಕೋಚ್ ಅನಿಲ್‌ ಕುಂಬ್ಳೆಗೆ ಟ್ಯಾಗ್‌ ಮಾಡಿದ್ದರು.

ಅನಿಲ್‌ ಕುಂಬ್ಳೆ ಈ ಚಾಲೆಂಜ್‌ನ್ನು‌ ತನ್ನ ಮುಂಗೈಯಲ್ಲಿ ಹಣ್ಣನ್ನು ಆಡಿಸುವ‌ ಮೂಲಕ ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಅನ್ನೊ ಸಂದೇಶ ಸಾರಿದ್ದಾರೆ.

ಜೊತೆಗೆ ವಿ ವಿ ಎಸ್‌ ಲಕ್ಷಣ್‌, ವೀರೇಂದ್ರ ಸೆಹ್ವಾಗ್‌‌ ಮತ್ತು ಪಂಜಾಬ್‌ ಕಿಂಗ್ಸ್‌ ಇಲೆವೆನ್‌ ತಂಡದ ನಾಯಕ ಕೆಎಲ್‌ ರಾಹುಲ್‌ಗೂ ಚಾಲೆಂಜ್‌ ಸ್ವೀಕರಿಸುವಂತೆ ಚಾಲೆಂಜ್‌ ಹಾಕಿ ಟ್ಯಾಗ್‌ ಮಾಡಿದ್ದಾರೆ.

 

LEAVE A REPLY

Please enter your comment!
Please enter your name here