ಭಜರಂಗಿ ಪೋಸ್ಟರ್ ಹೇಗಿದೆ..?- ಶಿವಣ್ಣ ಕೇಳಿದ್ದಾರೆ…!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಹಣೆಗೆ ಕೆಂಪು ನಾಮ ಬಳಿದು ಖಡಕ್ ಲುಕ್ ನಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದಾರೆ.

ಶಿವಣ್ಣನ ಮುಖಕ್ಕೆ ಅಭಿಮುಖವಾಗಿ ಜಡೆ ಬಿಟ್ಟಿರುವ ಕೈಯಲ್ಲಿ ಬ್ರಾಹ್ಮಣ ವೇಷಧಾರಿಯ ಚಿತ್ರವಿದೆ.

ಎಲ್ಲಾ ಕಣ್ಣುಗಳಿಂದ ಪ್ರಪಂಚ ಕಂಡರೆ ಕೆಲವೇ ಕಣ್ಣುಗಳಲ್ಲೇ ಪ್ರಪಂಚ ಕಾಣಿಸಿ ಬಿಡುತ್ತೆ ಕಾಣದ್ದು ಕಂಡುಹಿಡಿಯಲು ಕಂಡದ್ದು ಕಾಯಲು ಭಜರಂಗಿ ಮತ್ತೆ ಬರುತ್ತಿದ್ದಾನೆ ಎಂದು ಚಿತ್ರತಂಡ ಹೇಳಿದೆ.

ಭಜರಂಗಿ ಚಿತ್ರವನ್ನ ಎ ಹರ್ಷ ನಿರ್ದೇಶನ ಮಾಡುತ್ತಿದ್ದು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದಾರೆ ‌.

ಚಿತ್ರದ ಮೊದಲ ಪೋಸ್ಟರನ್ನು ಟ್ವೀಟಿಸಿರುವ ಶಿವಣ್ಣ ಹೇಗಿದೆ ಎಂದು ಅಭಿಮಾನಿಗಳಲ್ಲಿ ಕೇಳಿದ್ದಾರೆ.

LEAVE A REPLY

Please enter your comment!
Please enter your name here