ಬ್ಲೂ ಫಿಲ್ಮ್‌ ಸಿ ಡಿ ಇದ್ದರೆ ಬಿಡುಗಡೆ ಮಾಡಿ – ಸಚಿವ ನಾರಾಯಣಗೌಡಗೆ ಜೆಡಿಎಸ್‌ ಶಾಸಕರ ಸವಾಲು

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡಗೆ ತಾಕತ್ತಿದ್ರೆ ಅವರ ಬಳಿ ಇರುವ ಸಿ ಡಿಯನ್ನು ಬಿಡುಗಡೆ ಮಾಡಲಿ ಎಂದು ನಾಗಮಂಗಲ ಜೆಡಿಎಸ್‌ ಶಾಸಕ ಸುರೇಶ್‌ ಗೌಡ ಸವಾಲು ಹಾಕಿದ್ದಾರೆ.

ನಿನ್ನೆಯಷ್ಟೇ ಉಸ್ತುವಾರಿ ಸಚಿವ ನಾರಾಯಣಗೌಡ ಅವರು ತಮ್ಮ ಬಳಿ ಇರುವ ಸಿ ಡಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದ್ದರು.

ಈ ಬಗ್ಗೆ ಇವತ್ತು ಪ್ರತಿಕ್ರಿಯಿಸಿದ ಶಾಸಕ ಸುರೇಶ್‌ಗೌಡ ಬಾಂಬೆ ಗೌಡ ನಾರಾಯಣಗೌಡಗೆ ತಾಕತ್ತು ಇದ್ರೆ ಅದ್ಯಾವ ಸಿ ಡಿ ಇದೆಯೋ ಬಿಡೋಕೆ ಹೇಳಿ. ನಮಗ್ಯಾರಿಗೂ ಭಯ ಇಲ್ಲ. ನಾರಾಯಣಗೌಡ ಏನು ದೇವಲೋಕದಿಂದ ಇಳಿದು ಬಂದಿಲ್ಲ ಎಂದು ತಿರುಗೇಟು ನೀಡಿದರು.

ಸನ್ಯಾನ್ಮ ಬಾಂಬೆ ಗೌಡ್ರೆ ನೀವು ಆ ಸಿಡಿಗಳನ್ನು ಬಿಡಿ. ಅದರಲ್ಲಿ ಏನಿದೆ ಎಂದು ನಾವೂ ನೋಡೋಣ. ಯಾವುದಾದರೂ ಬೂ ಫಿಲ್ಮ್‌ ಇದೆಯೋ..? ನೋಡೋಣ ಬಿಡಿ. ನಾವು ನೋಡೋಕೆ ರೆಡಿ ಇದ್ದೀವಿ ಎಂದು ಸುರೇಶ್‌ ಗೌಡ ಸವಾಲು ಹಾಕಿದ್ದಾರೆ.

ಬಾಂಬೆಗೆ ಹೋಗಲ್ಲ, ಬೆಂಗಳೂರಲ್ಲಿ ಸಿಕ್ತವೇ..!

ನೀವೇನಾದ್ರೂ ಬಾಂಬೆ ಹೋಟೆಲ್‌ಗೆ ಹೋಗಿದ್ದೀರಾ..? ಎಂದು ಸಿ ಡಿ ಬಗ್ಗೆ ಮಾಧ್ಯಮದವರು ಶಾಸಕರನ್ನು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಬಾಂಬೆಗೆಲ್ಲ ಹೋಗೋರಲ್ಲ. ಎಲ್ಲವೂ ಇಲ್ಲೇ ಬೆಂಗಳೂರಲ್ಲೇ ಸಿಕ್ತವೇ. ಬಾಂಬೆಗೆ ಯಾಕೆ ಹೋಗೋಣ..? ಉತ್ತರಿಸಿದರು.

ಆದರೆ ಬಳಿಕ ನಾನು ಅಂದಿದ್ದು ವ್ಯಾಪಾರ-ವ್ಯವಹಾರ ಬೆಂಗಳೂರಲ್ಲೇ ಇವೆ ಎನ್ನುವ ಅರ್ಥದಲ್ಲಿ ತಮ್ಮ ವರಸೆ ಬದಲಿಸಿದರು.

ನಾವು ಜಿಲ್ಲಾಡಳಿತದ ನ್ಯೂನತೆಯ ಬಗ್ಗೆ ಮಾತಾಡ್ತಿದ್ದೀವಿ. ಅದನ್ನೇ ನನ್ನ ನ್ಯೂನತೆ ಎಂದು ಭಾವಿಸಿದ್ರೆ ನಾರಾಯಣಗೌಡ ಒಬ್ಬ ಫೂಲ್. ಸತ್ಯ ಗೊತ್ತಿದ್ದೂ ಜಿಲ್ಲಾಡಳಿತ ಕೊಟ್ಟ ತಪ್ಪು ಮಾಹಿತಿಯನ್ನ ಒಪ್ಪಿಕೊಳ್ಳಬೇಕಾ..? ರಾಜಕಾರಣದಲ್ಲಿ ನಾರಾಯಣಗೌಡ ಗೌಡನಿಗಿಂತ ಸೀನಿಯರ್. ಅವರಿಗಿಂತ ಮುಂಚೆ ಎಂಎಲ್‌ಎ ಆಗಿದ್ದವರು ನಾವು. ನಮ್ಮನ್ನ ಈ ರೀತಿಯೆಲ್ಲ ಬೆದರಿಸಲು ಪ್ರಯತ್ನಿಸಿದರೆ ಆಗಲ್ಲ

LEAVE A REPLY

Please enter your comment!
Please enter your name here