ಬ್ರೇಕಿಂಗ್‌ ನ್ಯೂಸ್‌: ಪದ್ಮ ಪ್ರಶಸ್ತಿ ಪ್ರಕಟ – ಇಲ್ಲಿದೆ ಲಿಸ್ಟ್‌

ಗಣರಾಜ್ಯೋತ್ಸವದ ಮುನ್ನಾ ದಿನವಾದ ಇವತ್ತು ಕೇಂದ್ರ ಸರ್ಕಾರ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಘೋಷಿಸಿದೆ.

ಭಾರತರತ್ನ ಬಳಿಕ ಎರಡನೇ ಅತೀ ಶ್ರೇಷ್ಠ ಗೌರವವಾಗಿರುವ ಪದ್ಮಶ್ರೀ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.

ಕರ್ನಾಟಕದ ತುಳಸಿ ಗೌಡ – ಅರಣ್ಯ ಜ್ಞಾನದ ಬಗೆಗಿನ ಎನ್‌ಸ್ಲೈಕ್ಲೋಪಿಡಿಯಾ ಎಂದೇ ಪ್ರಖ್ಯಾತಿ. ೭೨ ವರ್ಷದ ಇವರು ಬಡತನದ ಹೊರತಾಗಿಯೂ ೧ ಲಕ್ಷಕ್ಕೂ ಅಧಿಕ ಗಿಡಮರಗಳನ್ನು ಬೆಳೆಸಿದ ಖ್ಯಾತಿ. ಇವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಾಳಿ ಗ್ರಾಮದವರು.

ಅಕ್ಷರ ಸಂತ ಹರೆಕಲ ಹಜಬ್ಬ : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ನೆವಪಡಪು ಊರಿನವರು. ೨೦ ವರ್ಷಗಳಿಂದ ಕಿತ್ತಳೆಗಳನ್ನು ಮಾರಿ ಅದರಿಂದ ಬಂದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿದ ಖ್ಯಾತಿ. ಇವರು ಆರಂಭಿಸಿದ ಹಜಬ್ಬ ಎಂಬ ಶಾಲೆ ಈಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮಾರ್ಪಟ್ಟಿದೆ. ನೆಲೆಸುವುದಕ್ಕೆ ಒಂದೊಳ್ಳೆ ಮನೆ ಇಲ್ಲದೇ ಇದ್ದರೂ ೬೪ ವರ್ಷದ ಅನರಕ್ಷರಸ್ಥರಾದರೂ ತಮ್ಮ ಸೇವೆಯಿಂದ ಈ ಅಕ್ಷರ ಸಂತ ಎಂದೇ ಕರೆಸಿಕೊಂಡಿರುವ ಇವರು ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿದ್ದಾರೆ.

ಮುನ್ನಾ ಮಾಸ್ಟರ್‌ – ೬೧ ವರ್ಷದ ಇವರು ರಾಜಸ್ಥಾನದ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಭಗವಾನ್‌ ಕೃಷ್ಣ ಮತ್ತು ಗೋವುಗಳನ್ನು ಕುರಿತ ಭಜನೆಗಳನ್ನು ರಚಿಸಿದ್ದಾರೆ. ಶ್ರೀ ಶ್ಯಾಮ ಸುರಭಿ ವಂದನ ಇವರ ಪ್ರಖ್ಯಾತ ಪುಸ್ತಕ.

ಮೊಹ್ಮದ್‌ ಶರೀಫ್‌ : ಉತ್ತರ ಪ್ರದೇಶದ ಇವರ ವಯಸ್ಸು ೮೦. ಫೈಜಾಬಾದ್‌ ಮೂಲದ ಇವರು ತಮ್ಮ ಬಡತನದ ಹೊರತಾಗಿಯೂ ೨೫ ವರ್ಷಗಳಿಂದ ೨೫ ಸಾವಿರಕ್ಕೂ ಹೆಚ್ಚು ಅನಾಮಿಕ ಶವಗಳ ಅಂತ್ಯಸಂಸ್ಕಾರ ನೆರೆವೇರಿಸಿದ್ದಾರೆ. ವೃತ್ತಿಯಲ್ಲಿ ಇವರು ಸೈಕಲ್‌ ರಿಪೇರಿ ಮಾಡುತ್ತಾರೆ.

ಜಾವೇದ್‌ ಅಹ್ಮದ್‌ ಟಕ್‌ – ಸ್ವತಃ ದಿವ್ಯಾಂಗ ಆಗಿರುವ ೪೬ ವರ್ಷದ ಇವರು ಜಮ್ಮು-ಕಾಶ್ಮೀರದ ಹ್ಯೂಮಾನಿಟಿ ವೆಲ್‌ಫೇರ್‌ ಸಂಸ್ಥೆ ಮೂಲಕ ಝೈಬಾ ಅಪಾ ಸ್ಕೂಲ್‌ ಮೂಲಕ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಇತರೆ ನೆರವನ್ನೂ ನೀಡುತ್ತಿದ್ದಾರೆ. ಭಯೋತ್ಪಾದಕರ ದಾಳಿಯಲ್ಲಿ ಇವರಿಗೆ ಗುಂಡು ತಗುಲಿ ಬೆನ್ನಿನ ಮೂಳೆಗೆ ಘಾಸಿ ಆಗಿತ್ತು.

ಜಗದೀಶ್‌ ಲಾಲ್‌ ಅಹುಜಾ: ೮೪ ವರ್ಷ ವಯಸ್ಸಿನ ಇವರು ಲಂಗರ್‌ ಬಾಬಾ ಎಂದೇ ಖ್ಯಾತಿ. ಪೇಶಾವರದಲ್ಲಿ ಜನಿಸಿರುವ ಇವರು ಭಾರತ-ಪಾಕಿಸ್ತಾನ ವಿಭಜನೆಯ ಬಳಿಕ ಭಾರತಕ್ಕೆ ಬಂದು ನೆಲಸಿದ್ದರು. ಕೋಟ್ಯಾಧಿಪತಿ ಆಗಿರುವ ಇವರು ಪ್ರತಿದಿನ ೨ ಸಾವಿರಕ್ಕೂ ಅಧಿಕ ಬಡ ರೋಗಿಗಳಿಗೆ ಪ್ರತಿದಿನ ಅನ್ನಾಹಾರ ಧರ್ಮಾರ್ಥ ಸೇವೆ ಮಾಡುತ್ತಾರೆ.

ರಾಧಾ ಮೋಹನ್‌: ಒಡಿಶಾ ಮೂಲಕದ ೭೬ ವರ್ಷದ ತಂದೆ ಮತ್ತು ೪೬ ವರ್ಷದ ಮಗಳು ಸಾವಯವ ಕೃಷಿಯಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಕೃಷಿಗೆ ಮೂಲ ಸಂಪನ್ಮೂಲ ಒದಗಿಸುವ ಸಂಭವ್‌ ಹೆಸರಿನ ಹೊಸ ಸಂಸ್ಥೆಯನ್ನು ಹುಟ್ಟುಹಾಕಿದರು. ನಯಾಘರ್‌ ಜಿಲ್ಲೆಯಲ್ಲಿ ೩೬ ಎಕರೆಯಷ್ಟು ಪಾಳುಬಿದ್ದ ಭೂಮಿಯನ್ನು ಅರಣ್ಯವನ್ನು ಬೆಳೆಸಿದರು. ಆ ಕಾಡಲ್ಲಿ ಈಗ ೧ ಸಾವಿರ ಪ್ರಬೇಧದ ಗಿಡಗಳು, ೫೦೦ ಬಗೆಯ ಭತ್ತದ ತಳಿಗಳನ್ನು ಬೆಳೆದಿದ್ದಾರೆ.

LEAVE A REPLY

Please enter your comment!
Please enter your name here