ಬ್ರಿಸ್ಬೆನ್ ನಲ್ಲೂ ಸೇಮ್ ಟು ಸೇಮ್ – ಸಿರಾಜ್ ಗೆ ಆಸೀಸ್ ಅಭಿಮಾನಿಗಳ ಬೈಯ್ಗುಳ

ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ನೆಲದಲ್ಲಿ ಅವಮಾನಗಳಾಗುತ್ತಲೇ ಇವೆ. ಮೊನ್ನೆ ಸಿಡ್ನಿ ಟೆಸ್ ಪಂದ್ಯ ನೋಡಲು ಬಂದಿದ್ದ ಆಸ್ಟ್ರೇಲಿಯಾದ ಅಭಿಮಾನಿಗಳು, ಆಕ್ಷೇಪಾರ್ಹ ಪದಗಳಿಂದ ನಿಂದಿಸಿದ್ದರು. ಈ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ.

ಬ್ರಿಸ್ಬೆನ್ ಟೆಸ್ಟ್ ಪಂದ್ಯದ ಮೊದಲ‌ ದಿನವೇ ಸೇಮ್ ಟು ಸೇಮ್ ಅಪಮಾನ ಎದುರಾಗಿದೆ. ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಮಹ್ಮದ್ ಸಿರಾಜ್ ಮೇಲೆ ಮ್ಯಾಚ್‌ ನೋಡಲು ಬಂದಿದ್ದವರೊಬ್ಬರು ನಾಲಗೆ ಹರಿಬಿಟ್ಟಿದ್ದಾರೆ‌. ನಮ್ಮ‌ ಕಡೆ ಕೈ ಬೀಸು ಸಿರಾಜ್ ಎಂದು ಜೋರಾಗಿ ಕೂಗುತ್ತಾರೆ. ಕೊನೆಗೆ ಯೂ ಬ್ಲಡಿ ಗ್ರಬ್ (ಗಲೀಜು ಮನುಷ್ಯ) ಎಂದು ಬೈಯ್ದಿದ್ದಾರೆ.

ಮಹ್ಮದ್ ಸಿರಾಜ್ ಜೊತೆಗೆ ವಾಷಿಂಗ್ಟನ್ ಸುಂದರ್ ಅವರನ್ನು ಆಸೀಸ್ ಅಬಿಮಾನಿಗಳು ಟಾರ್ಗೆಟ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here