ಬೇರೆ ಜಿಲ್ಲೆಗಳಿಗೆ ಹೋಗಲು ಆನ್‌ಲೈನ್‌ನಲ್ಲಿ ಇ-ಪಾಸ್‌ ಪಡೆಯುವುದು ಹೇಗೆ..? – ಇಲ್ಲಿದೆ ಮಾಹಿತಿ

ನಾಳೆಯಿಂದ ರಾಜ್ಯದಲ್ಲಿ ಕೈಗಾರಿಕೆಗಳು ಸೇರಿದಂತೆ ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಕೆಲಸಕ್ಕೆ ಹೋಗಲು ಒಪ್ಪಿಗೆ ನೀಡಿದೆ. ಹೀಗೆ ಕೆಲಸಕ್ಕೆ ಹೋಗುವವರ ಸಲುವಾಗಿಯೇ ಇವತ್ತಿನಿಂದ ಆನ್‌ಲೈನ್‌ ಪಾಸ್‌ ನೀಡುವ ವ್ಯವಸ್ಥೆಯನ್ನೂ ಆರಂಭಿದೆ.

೧) ಬೇರೆ ಜಿಲ್ಲೆಗಳಿಗೆ ಕೆಲಸಕ್ಕಾಗಿ ಹೋಗಲು ಬಯಸುವವರು ಟ್ರಾವೆಲ್‌ ಪಾಸ್‌ಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

೨) ಇದು ಕೇವಲ ಒನ್‌ ವೇ ಮತ್ತು ಒನ್‌ ಟೈಮ್‌ ಪಾಸ್‌ ಆಗಿದೆ. ಅಂದರೆ ಒಂದು ವೇಳೆ ಬೇರೆ ಜಿಲ್ಲೆಯಿಂದ ಬೆಂಗಳೂರಿಗೆ ಬಂದರೆ ಮತ್ತೆ ಅದೇ ಪಾಸ್‌ನಲ್ಲಿ ವಾಪಸ್‌ ಹೋಗಲು ಅವಕಾಶವಿಲ್ಲ.

೩) ಆನ್‌ಲೈನ್‌ನಲ್ಲಿ ಪಾಸ್‌ ಪಡೆಯಲು ನೀವು ಮೊಬೈಲ್‌ ಸಂಖ್ಯೆಯನ್ನು ಎಂಟ್ರಿ ಮಾಡಬೇಕು. ಒಂದು ಸಲ ಎಂಟ್ರಿ ಮಾಡಿದ ಸಂಖ್ಯೆಯನ್ನು ಎರಡನೇ ಬಾರಿ ಪಾಸ್‌ ಪಡೆಯಲು ಬಳಸುವಂತಿಲ್ಲ.

೪) ಒಂದು ವೇಳೆ ಚಾಲಕ ಜನರನ್ನು ಬೇರೆ ಜಿಲ್ಲೆಗಳಿಗೆ ಬಿಟ್ಟು ಬರುವುದಾದರೆ ಆಗ ಆತ ವಾಪಸ್‌ ಹೋಗಲು ಆಟೋಮೆಟಿಕ್‌ ಆಗಿ ರಿಟರ್ನ್‌ ಪಾಸ್‌ ಕೂಡಾ ಸಿಗುತ್ತದೆ.

೫) ಆನ್‌ಲೈನ್‌ನಲ್ಲಿ ನೀವು ಸಲ್ಲಿಸಿದ ಅರ್ಜಿ ಅಪ್ರೂವ್‌ ಆದ ಕೂಡಲೇ ನೀವು ನಮೂದಿಸಿದ ನಂಬರ್‌ಗೆ ಲಿಂಕ್‌ ಬರುತ್ತದೆ. ಆ ಲಿಂಕ್‌ಗೆ ಕ್ಲಿಕ್‌ ಮಾಡಿ ನೀವು ಪಾಸ್‌ನ್ನು ಪಿಡಿಎಫ್‌ ನಮೂನೆಯಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

೬) ಯಾರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಗೊತ್ತಾಗುವುದಿಲ್ಲವೋ ಅವರು ಹತ್ತಿರದ ಪೊಲೀಸ್‌ ಸ್ಟೇಷನ್‌ಗೆ ತೆರಳಿ ಸಹಾಯ ಪಡೆಯಬಹುದು.

ಅರ್ಜಿ ಸಲ್ಲಿಕೆ ಮಾಡಬೇಕಾದ ಲಿಂಕ್‌: ಅದರ ಮೇಲೆ ಕ್ಲಿಕ್‌ ಮಾಡಿ. 

KSP CLEAR Pass – InterDistrictPass Apply Online Here kspclearpass.idp.mygate.com

ಕೊಡಬೇಕಾದ ಮಾಹಿತಿಗಳು: (ಎಲ್ಲಾ ಜಿಲ್ಲೆಯವರಿಗೂ ಅನ್ವಯ)

ಅರ್ಜಿದಾರರ ಹೆಸರು, ಮೊಬೈಲ್‌ ನಂಬರ್‌, ಆಧಾರ್‌ ನಂಬರ್‌ನ ಕಡೆಯ ನಾಲ್ಕು ಅಂಕಿ, ಈಗಿರುವ ವಿಳಾಸ ಮತ್ತು ಹೋಗಬೇಕಾದ ವಿಳಾಸ, ಟ್ರಾವೆಲ್‌ ಮಾಡುವ ದಿನ, ನೀವು ಪ್ರಯಾಣಿಸುವ ವಾಹನ ಸಂಖ್ಯೆ, ವಾಹನದ ಟೈಪ್‌ ಮತ್ತು ಡ್ರೈವರ್‌ ಜೊತೆಗೆ ಪ್ರಯಾಣಿಸುತ್ತಿದ್ದೀರಾ ಎಂಬ ಮಾಹಿತಿ.

ಆನ್‌ಲೈನ್‌ ಅರ್ಜಿ ನಮೂನೆ ಹೀಗಿದೆ: (ಎಲ್ಲಾ ಜಿಲ್ಲೆಯವರಿಗೂ ಅನ್ವಯ)

ಇದನ್ನೂ ಓದಿ:

ಕೆಲಸಕ್ಕಾಗಿ ಬೇರೆ ಜಿಲ್ಲೆಗಳಿಗೆ ಹೋಗಲು ಅನುಮತಿ – ರಾಜ್ಯ ಸರ್ಕಾರದ ಆದೇಶ – ಸಂಪೂರ್ಣ ಮಾಹಿತಿ ಇಲ್ಲಿದೆ

LEAVE A REPLY

Please enter your comment!
Please enter your name here