ಬೆಳೆ ಸಾಲ ಪಾವತಿ ಅವಧಿ ಆಗಸ್ಟ್‌ವರೆಗೆ ವಿಸ್ತರಣೆ – ಆಗಸ್ಟ್‌ ಒಳಗೆ ಪಾವತಿಸಿದರೆ ಶೇ.2ರಷ್ಟು ವಿನಾಯ್ತಿ

3 ಲಕ್ಷ ರೂಪಾಯಿವರೆಗಿನ ಬೆಳೆ ಸಾಲದ ಮೇಲೆ ಶೇಕಡಾ 2ರಷ್ಟು ಬಡ್ಡಿ ವಿನಾಯ್ತಿ ಲಾಭ ಪಡೆಯುವ ಅವಧಿಯನ್ನು ಕೇಂದ್ರ ಸರ್ಕಾರ ಆಗಸ್ಟ್‌ 31ರವರೆಗೆ ವಿಸ್ತರಿಸಿದೆ.

ಇವತ್ತು ಪ್ರಧಾನಿ ನರೇಂದ್ರ ಮೋದಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಇದೂ ಕೂಡಾ ವಿಶೇಷ ಪ್ಯಾಕೇಜ್‌ನ ಭಾಗವಾಗಿದೆ.

ಸಾಲ ಮರು ಪಾವತಿ ಅವಧಿಯನ್ನು ಆಗಸ್ಟ್‌ 31ರವರೆಗೆ ವಿಸ್ತರಿಸಿ ಆರ್‌ಬಿಐ ನಿರ್ದೇಶನ ನೀಡಿತ್ತು.

ಆಗಸ್ಟ್‌ 31ರೊಳಗೆ ಸಹಕಾರಿ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದಿರುವ ರೈತರು ಸಾಲ ಪಾವತಿ ಮಾಡಿದರೆ ಆಗ ಶೇಕಡಾ 2ರಷ್ಟು ಬಡ್ಡಿ ವಿನಾಯಿತಿ ಪಡೆಯಲಿದ್ದಾರೆ.

LEAVE A REPLY

Please enter your comment!
Please enter your name here