ಬೆಡ್ ಬ್ಲಾಕಿಂಗ್ ನಲ್ಲಿ ರಾಜಕಾರಣಿಗಳ ಪಾತ್ರವೇ ಹೆಚ್ಚು – ವಾರದ ಮೊದಲೇ ಗಮನಕ್ಕೆ ಬಂದರೂ ಸುಮ್ಮನಿದ್ದ ಸರ್ಕಾರ

ಬಿಜೆಪಿಯ ಜನಪ್ರತಿನಿಧಿಗಳು ‘ಎಕ್ಸ್ ಪೋಸ್’ ಮಾಡಿದ ಬೆಡ್ ಬ್ಲಾಕಿಂಗ್ ಹಗರಣ ಬಯಲಾಗುವ ವಾರದ ಮೊದಲೇ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ಬೆಡ್ ಹಂಚಿಕೆ ವಿಚಾರದಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಮಿತಿ ಮೀರಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತಂದಿದ್ದರು. ಅದರೆ, ಸರ್ಕಾರ ಈ ಕಡೆ ಗಮನ ಹರಿಸಲೇ ಇಲ್ಲ.

ಶೇಕಡಾ 75ರಷ್ಟು ಬೆಡ್ ಗಳನ್ನು ರಾಜಕಾರಣಿಗಳೇ ತಮ್ಮ ಪ್ರಭಾವ ಬೀರಿ ಬ್ಲಾಕ್ ಮಾಡಿಸುತ್ತಿದ್ದಾರೆ. ಸಂಸದರಿಂದ ಹಿಡಿದು ಶಾಸಕರು, ಪಾಲಿಕೆಯ ಮಾಜಿ ಸದಸ್ಯರವರೆಗೂ ಮತ್ತು ಅವರ ಬಲಗೈ ಬಂಟರು ಒತ್ತಡ ಹೇರಿ ಬೆಡ್ ಗಳನ್ನು ಬ್ಲಾಕ್ ಮಾಡಿಸುತ್ತಿದ್ದಾರೆ.ಆಕ್ಸಿಜನ್ ಸ್ಯಾಚುರೇಷನ್ ಲೆವೆಲ್ ಚನ್ನಾಗಿರುವವರಿಗೂ ಐಸಿಯು ಬೆಡ್, ಸ್ವಲ್ಪ ಸೋಂಕು ಲಕ್ಷಣ ಕಂಡು ಬಂದವರಿಗೂ ವೆಂಟಿಲೆಟರ್ ಬೆಡ್ ಗಳನ್ನು ನಿಗದಿ ಮಾಡಿಸುತ್ತಿದ್ದಾರೆಎಂದು ಅಧಿಕಾರಿಗಳು ದೂರು ನೀಡಿದ್ದರು. ಇದನ್ನೆಲ್ಲಾ ಕೇಳಿಸಿಕೊಂಡಿದ್ದ ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಗಮನ ಹರಿಸುವಂತೆ ಐಎಎಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.


ಏಪ್ರಿಲ್ 25ರಂದು ಮುಖ್ಯ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಸಭೆ ನಡೆದ ಬಳಿಕ ಬಿಬಿಎಂಪಿ ಅಧಿಕಾರಿಗಳು ಬೊಮ್ಮನಹಳ್ಳಿ ವಲಯದ ಕೋವಿಡ್ ವಾರ್ ರೂಂ ಪರಿಶೀಲನೆ ನಡೆಸಿದ್ದರು.ಸತ್ತವರು ಮತ್ತು ಡಿಸ್ಚಾರ್ಜ್ ಆಗಿದ್ದ ರೋಗಿಗಳ ಹೆಸರಲ್ಲಿ ಬೆಡ್ ಬ್ಲಾಕ್ ಮಾಡಿದ್ದ ಬನ್ನೆರುಘಟ್ಟ ರಸ್ತೆಯ ಅಪೋಲೋ ಅಸ್ಪತ್ರೆ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.ಬೆಡ್ ಬ್ಲಾಕಿಂಗ್ ದಂಧೆಯ ವ್ಯಾಪ್ತಿ ಎಷ್ಟು..?
ಕೆಲವರು ದುಡ್ಡಿನ ಆಸೆಗಾಗಿ
ಬೆಡ್ ಗಳನ್ನು ಬ್ಲಾಕ್ ಮಾಡಿರುವ ಪ್ರಕರಣಗಳ ಪ್ರಮಾಣ ಶೇಕಡಾ 5ನ್ನು ಕೂಡ ಮೀರಲ್ಲ.. ನಿಜವಾದ ಹಗರಣ ನಡೆಸಿರುವುದು ರಾಜಕಾರಣಿಗಳು ಮತ್ತು ಖಾಸಗಿ ಅಸ್ಪತ್ರೆಗಳು ಎಂದು ಹೆಸರು ಹೇಳಲಿಚ್ಚಿಸದ ಬಿಬಿಎಂಪಿ ಅಧಿಕಾರಿ ಆರೋಪ ಮಾಡುತ್ತಾರೆ.ರಾಜಕಾರಣಿಗಳ ವಿರುದ್ಧ ನೇರವಾಗಿ ದೂರು ಮಾಡಲು ಅಧಿಕಾರಿಗಳು ಹಿಂಜರಿಯುತ್ತಿದ್ದರು. ಆದರೆ, ಖಾಸಗಿ ಅಸ್ಪತ್ರೆಗಳ ವಿರುದ್ಧ ಪ್ತಕರಣ ದಾಖಲಾಗಿದ್ದು, ಅಸಲಿ ಅಕ್ರಮದ ಪ್ರಸ್ತಾಪಿಸಲು ಅಧಿಕಾರಿಗಳು ಧೈರ್ಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬೊಮ್ಮನಹಳ್ಳಿ ವಲಯದ ಕೋವಿಡ್ ವಾರ್ ರೂಂನಲ್ಲಿ ಐಎಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ಮೇಲೆ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರು ಹಲ್ಲೆ ಯತ್ನ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here