ಬೆಂಗಳೂರು ಮೆಟ್ರೊದ ಹಂತ 2 ಎ ಮತ್ತು 2 ಬಿ ಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ

ರಾಜ್ಯ ಸರ್ಕಾರದ ಬೆಂಗಳೂರಿನ ನಮ್ಮ ಮೆಟ್ರೋದ 2ಎ ಮತ್ತು 2 ಬಿ ಹಂತದ ವಿಸ್ತರೆಣೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿ 14.788 ಕೋಟಿ ರೂ ಗಳನ್ನು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರದೀಪ್ ಪುರಿ ಸಿಂಗ್, ನಗರ ಭೂ ದೃಶ್ಯ ಬದಲಾಯಿಸುವ ಪ್ರಕ್ರಿಯೆ ನಡೆದಿದೆ, ಬೆಂಗಳೂರಿನ ಮೆಟ್ರೋ ಬಗ್ಗೆ ಕೇಂದ್ರ ಸಚಿವಾಲಯವು ಇಂದು ನಿರ್ಧಾರ ಕೈಗೊಂಡಿದ್ದು, ಬೆಂಗಳೂರಿನ 2 ಎ ಹಂತದ ಸಿಲ್ಕ್ ಬೋರ್ಡ್ ನಿಂದ ಕೆ.ಆರ್.ಪುರಂ ವರೆಗಿನ 19 ಕಿ.ಮೀ ಹಾಗೂ 13 ಮೆಟ್ರೋ ನಿಲ್ದಾಣಗಳಿಗೆ ಹಾಗೂ 2ಬಿ ಹಂತದ ಕೆ.ಆರ್.ಪುರಂ ನಿಂದ ಇಂಟೆಲ್ ವಿಮಾನ ನಿಲ್ದಾನದ ವರೆಗಿನ 38 ಕಿ.ಮೀ ಹಾಗೂ 17 ಮೆಟ್ರೋ ನಿಲ್ದಾಣಗಳಿಗೆ ಬೆಂಗಳೂರು ನಮ್ಮ ಮೆಟ್ರೋ ವಿಸ್ತರಿಸಲು ಕೇಂದ್ರ ಸರ್ಕಾರವು 14,788 ಕೋ. ರೂಗಳ ಅನುದಾನ ನೀಡಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಮೆಟ್ರೋ ವಿಸ್ತರಣೆಗೆ ಅನುಮೋದನೆಗೆ ಹರ್ಷ ವ್ಯಕ್ತಪಡಿಸಿರುವ ಸಿಎಂ ಬಿಎಸ್ ಯಡಿಯೂರಪ್ಪನವರು, ಕೇಂದ್ರ ಕ್ಯಾಬಿನೆಟ್ ಬೆಂಗಳೂರು ಮೆಟ್ರೋದ 2 ಎ ಮತ್ತು 2 ಬಿ ಹಂತದ ವಿಸ್ತರಣೆಗೆ ಅನುಮೋದನೆ ನೀಡಿದೆ. ಇದು ಬೆಂಗಳೂರು ಸಾರಿಗೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಹೇಳಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here