ಬೆಂಗಳೂರಿನ ಪೋಲೀಸ್‌ ಆಯುಕ್ತರಿಂದ ಮಹಿಳಾ ಸುರಕ಼ತೆಗೆ ಹೊಸ ಹೆಜ್ಜೆ..

ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ರಾಜ್ಯದಲ್ಲಿ 2017ರಲ್ಲಿ ‘ಸುರಕ್ಷಾ ಆಪ್‌’ ಅನ್ನು ಪರಿಚಯಿಸಲಾಗಿದ್ದು, ಆದರೆ ಇನ್ನು ಅನೇಕ ಮಹಿಳೆಯರಿಗೆ ಈ ಆಪ್‌ ಬಗ್ಗೆ ಮಾಹಿತಿ ತಿಳಿದಿಲ್ಲ. ಆ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಈಗಾಗಲೇ ಕಳೆದ ೧ ವಾರದಲ್ಲಿ  ಸುಮಾರು ೧.೩ ಲಕ್ಷದಷ್ಟು ಮಹಿಳೆಯರು ಆಪ್ ಡೌನ್‌ಲೋಡ್ ಮಾಡಿದ್ದಾರೆ.

  ಮಹಿಳೆಯು ತುರ್ತು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಾಗ, ಸುರಕ್ಷಾ ಆಪ್‌ ಬಳಕೆ ಮಾಡಿದರೇ ತಕ್ಷಣಕ್ಕೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಹಾಯ ಮಾಡುತ್ತಾರೆ. ಹಾಗೆಯೇ ಸುರಕ್ಷಾ ಆಪ್ ಬಳಕೆ ಮಾಡುವುದು ಹೇಗೆ?..ಆಪ್‌ನಲ್ಲಿ ಏನೆಲ್ಲಾ ಮಾಹಿತಿ ಭರ್ತಿ ಮಾಡಬೇಕು ಎನ್ನುವ ಬಗ್ಗೆ ಕೆಲವು ಅಂಶಗಳ ಬಗ್ಗೆ ತಿಳಿಸಿಕೊಡುವ ಸಣ್ಣ ಪ್ರಯತ್ನ ನಮ್ಮದು.

ಸುರಕ್ಷಾ ಆಪ್‌ ಹೇಗೆ ಕೆಲಸ ಮಾಡುತ್ತದೆ ಮಹಿಳೆಯರು ತುರ್ತು ಪರಿಸ್ಥಿತಿಯಲ್ಲಿದ್ದಾಗ ಸುರಕ್ಷಾ ಆಪ್ ನೆರವಿನಿಂದ ತ್ವರಿತವಾಗಿ ಪೊಲೀಸ್‌ರ ಸಹಾಯ ಪಡೆಯಬಹುದಾಗಿದೆ.

 

ಈ ಆಪ್‌ನಲ್ಲಿ ಮಹಿಳೆಯರು ರೆಡ್ ಬಟನ್ ಪ್ರೆಸ್ ಮಾಡಿದರೇ ತಕ್ಷಣಕ್ಕೆ ಅಲ್ಲಿಯ ಮಾಹಿತಿ ಪೊಲೀಸರಿಗೆ ಮಾಹಿತಿ ರವಾನೆಯಾಗುತ್ತದೆ. ಜೊತೆಗೆ ಆ ಸ್ಥಳದ 10 ಸೆಕೆಂಡ್‌ನ ಲೈವ್ ವಿಡಿಯೊ ಸಹ ತಲುಪುವುದು.
ಇದರೊಂದಿಗೆ ಮಹಿಳೆಯ ಇಬ್ಬರು ಕುಟುಂಬ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ತುರ್ತು ಪರಿಸ್ಥಿತಿ ಇರುವ ಬಗ್ಗೆ ಸಂದೇಶ ಹೋಗುತ್ತದೆ. ಆಗ ಫೋನ್ ಜಿಪಿಎಸ್‌ ಆಧಾರದ ಮೇಲೆ ಸ್ಥಳಕ್ಕೆ ಪೊಲೀಸರು ಬರುತ್ತಾರೆ. ಪೊಲೀಸ ಸಹಾಯವಾಣಿ 100 ಕರೆ ಗಿಂತ ವೇಗವಾಗಿ ಸುರಕ್ಷಾ ಆಪ್  ಕೆಲಸ ಮಾಡುತ್ತದೆ.

ಹಾಗಾದರೆ ಈ ಆಪ್ ಬಳಕೆ ಹೇಗೆ
* ತುರ್ತು ಪರಿಸ್ಥಿತಿಯಲ್ಲಿದ್ದಾಗ ಸುರಕ್ಷಾ ಆಪ್‌ ತೆರೆಯುವುದು
* ಪೊಲೀಸರ ಸಹಾಯ ಪಡೆಯಲು ಆಪ್‌ನಲ್ಲಿನ ರೆಡ್‌  ಬಟನ್‌ ಅನ್ನು 5 ಬಾರಿ ಒತ್ತುವುದು
* ಆಗ ಅಲ್ಲಿನ ಪರಿಸ್ಥಿಯ ಬಗ್ಗೆ 10 ಸೆಕೆಂಡುಗಳ ಲೈವ್ ವೀಡಿಯೊ ಮಾಹಿತಿ ಪೊಲೀಸರಿಗೆ ತಲುಪುವುದು.
* ಹಾಗೆಯೇ ಮಹಿಳೆಯ ಇಬ್ಬರು ಕುಟುಂಬ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ಮಾಹಿತಿ ತಲುಪುವುದು.
* ಸುಮಾರು 9 ನಿಮಿಷಗಳಲ್ಲಿ ಸ್ಥಳಕ್ಕೆ ಪೊಲೀಸರು ಬರುತ್ತಾರೆ.

ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ?
ತುರ್ತು ಪರಿಸ್ಥಿತಿಯಲ್ಲಿ ಮಹಿಳೆಯರ ನೆರವಿಗೆ ಸುರಕ್ಷಾ ಆಪ್ ಅನುಕೂಲವಾಗಿದ್ದು, ಅವಶ್ಯವಾಗಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಈ ಆಪ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Suraksha app ಉಚಿತವಾಗಿ ಲಭ್ಯವಿದೆ. ಆಪ್ ಇನ್​ಸ್ಟಾಲ್ ಆದ ಬಳಿಕ ನೋಂದಣಿಗೆ ಹೆಸರು, ವಿಳಾಸ, ಮೊಬೈಲ್ ನಂಬರ್ ಹಾಗೂ ತುರ್ತು ಸಂದರ್ಭದಲ್ಲಿ ನಿಮಗೆ ತಕ್ಷಣ ಸ್ಪಂದಿಸುವ ಕೆಲ ವ್ಯಕ್ತಿಗಳ ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ಬಳಿಕವಷ್ಟೇ ಈ ಆಪ್ ಸೇವೆ ಲಭ್ಯವಾಗಲಿದೆ.

ಬೆಂಗಳೂರು ನಗರದಲ್ಲಿ ಸುರಕ್ಷಾ ಆಪ್ ಬಳಕೆಯಿಂದ ಮಹಿಳೆಯರಿಗೆ ತೊಂದರೆಯಾದಾಗ ಬಹಳ ಉಪಯುಕ್ತವಾಗುತ್ತಿದೆ ಎಂದು ಅಭಿಪ್ರಾಯ. ಬೆಂಗಳೂರಿನ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ರಿಂದ ಖುದ್ದು ರಿಯಾಲಿಟಿ ಚೆಕ್ ಕೂಡ ಮಾಡಲಾಗಿದೆ. ತಾವು ಇರುವ ಸ್ಥಳದಲ್ಲೇ ಯುವತಿಯರಿಗೆ ಸುರಕ್ಷಾ ಆಪ್ ಡೌನ್ ಲೋಡ್ ಮಾಡಿಸಿ ಸುರಕ್ಷಾ ಆಪ್ ಬಳಕೆ ಬಗ್ಗೆ ಯುವತಿಯರಿಗೆ ತಿಳುವಳಿಕೆ ನೀಡಿ ಯಾವುದೇ ತೊಂದರೆ , ಸಮಸ್ಯೆಯಲ್ಲಿದಾಗ ಸುರಕ್ಷಾ ಆಪ್ ಬಳಕೆ ಬಗ್ಗೆ ಒಂದು ರಿಯಾಲಿಟಿ ಚೆಕ್ ನಡೆಸಲಾಯಿತು. 

ಪೊಲೀಸರ ಹೊಯ್ಸಳ ವಾಹನ ನಮ್ಮ ಬಳಿ ಬರುತ್ತೋ ಇಲ್ವೋ ಎಂದು ರಿಯಾಲಿಟಿ ಚೆಕ್ ಮಾಡಿದ ಯುವತಿಯರು,ತಮಗೆ ಸಮಸ್ಯೆ ಆಗಿದೆ ಎಂದು ಸುರಕ್ಷಾ ಆಪ್ ಒತ್ತಿದ ತಕ್ಷಣ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು, ಕೆಲವು ಕಡೆ 6 ನಿಮಿಷ, ಕೆಲವು ಕಡೆ 1 ನಿಮಿಷ,2 ನಿಮಿಷದಲ್ಲಿ ಮಹಿಳೆಯರು ಇರೋ ಸ್ಥಳಕ್ಕೆ ಹೊಯ್ಸಳ ಪೊಲೀಸರು ಬಂದಿದ್ದಾರೆ. ಕೂಡಲೇ ಸ್ಪಂದನೆ ಮಾಡಿದ ಹೊಯ್ಸಳ ಪೊಲೀಸರಿಗೆ ಯುವತಿಯರು ಧನ್ಯವಾದ  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here