ಬೆಂಗಳೂರಿನಲ್ಲಿ ದೆಹಲಿ ಮೊಹಲ್ಲಾ ಮಾದರಿಯ ಆರೋಗ್ಯ ಕೇಂದ್ರಗಳ ಸ್ಥಾಪನೆ

ದೆಹಲಿ ಆಮ್ ಆದ್ಮಿ ಪಕ್ಷದ ಮೊಹಲ್ಲಾ ಆರೋಗ್ಯ ಕೇಂದ್ರಗಳಂತೆ ಬೆಂಗಳೂರಿನಲ್ಲಿಯೂ ಬಡವರಿಗೆ ಉಚಿತ ಚಿಕಿತ್ಸೆ ನೀಡಲು ರಾಷ್ಟ್ರೀಯ ನಗರ ಆರೋಗ್ಯ ಮಿಷನ್(ಎನ್​ಯುಎಚ್​ಎಮ್)​ ಅಡಿಯಲ್ಲಿ ಆರೋಗ್ಯ ಕೇಂದ್ರಗಳನ್ನು ರಾಜ್ಯ ಸರ್ಕಾರ ಸ್ಥಾಪಿಸುತ್ತಿದೆ. ಈ ಆರೋಗ್ಯ ಕೇಂದ್ರಗಳಿಗೆ ಜನಾರೋಗ್ಯ ಕ್ಷೇಮ ಕೇಂದ್ರಗಳೆಂದು ಕರೆಯಲಾಗುತ್ತದೆ. ಈ ಕೇಂದ್ರಗಳು ಬೆಂಗಳೂರಿನ ಬಡವರಿಗಾಗಿ ಕಾರ್ಯನಿರ್ವಹಿಸಲಿದ್ದು, ಬೆಂಗಳೂರು ಮಹಾನಗರ ಪಾಲಿಕೆ ಈ ಕೇಂದ್ರಗಳನ್ನು ನಿರ್ವಹಿಸಲಿದೆ.

ಬೆಂಗಳೂರು ಮಹಾನಗರ ಪಾಲಿಕೆಯ 141 ವಾರ್ಡ್​ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಇನ್ನುಳಿದ 57 ವಾರ್ಡ್​ಗಳಲ್ಲಿ ಜನಾರೋಗ್ಯ ಕ್ಷೇಮ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. ನೂತನವಾಗಿ ಪ್ರಾರಂಭಿಸಲಾಗುವ ಪ್ರತಿಯೊಂದು ಜನಾರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಒಬ್ಬ ವೈದ್ಯಕೀಯ ಅಧಿಕಾರಿ, ದಾದಿ, ಲ್ಯಾಬ್ ಟೆಕ್ನೀಷಿಯನ್, ಫಾರ್ಮಾಸಿಸ್ಟ್ ಮತ್ತು ಗ್ರೂಪ್ ಡಿ ಸಿಬ್ಬಂದಿಯನ್ನು ಹೊಂದಿರಲಿದೆ.

ಸರ್ಕಾರಿ ಕಟ್ಟಡ ಲಭ್ಯವಿರುವ ವಾರ್ಡ್​ಗಳಲ್ಲಿ ಅಲ್ಲಿಯೇ ಜನಾರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಸರ್ಕಾರಿ ಕಟ್ಟದ ಲಭ್ಯವಿಲ್ಲದ ಕಡೆ ಕಟ್ಟಡಗಳನ್ನು ಬಾಡಿಗೆ ಪಡೆದು  ಜನಾರೋಗ್ಯ ಕೇಂದ್ರಗಳನ್ನು ಶೀಘ್ರವೇ ಪ್ರಾರಂಭಿಸಲಾಗುವುದು ಎಂದು ರಾಷ್ಟ್ರೀಯ ನಗರ ಆರೋಗ್ಯ ಮಿಷನ್​ನ ರಾಜ್ಯ ನೋಡೆಲ್ ಅಧಿಕಾರಿ ಡಾ.ಪ್ರಭು ಗೌಡ ಹೇಳಿದರು.

LEAVE A REPLY

Please enter your comment!
Please enter your name here