ಬೆಂಗಳೂರಲ್ಲಿ 119 ಮುಖ್ಯ ರಸ್ತೆಗಳು ಬಂದ್‌..! – ಯಾವ ಯಾವ ರೋಡ್‌ ಇಲ್ಲಿದೆ ಲಿಸ್ಟ್‌..!

ಕೊರೋನಾ ತಡೆಗಾಗಿ ಬೆಂಗಳೂರು ಪೊಲೀಸರು ರಸ್ತೆಗಳನ್ನೇ ಬಂದ್‌ ಮಾಡುತ್ತಿದ್ದು ಜನರ ಓಡಾಟಕ್ಕೆ ನಿರ್ಬಂಧ ಹಾಕುತ್ತಿದ್ದಾರೆ. ಬೆಂಗಳೂರು ಈಶಾನ್ಯ ವಲಯದ ಪೊಲೀಸರು 119 ಮುಖ್ಯ ರಸ್ತೆಗಳನ್ನು ಬಂದ್‌ ಮಾಡಿದ್ದಾರೆ.

ಯಲಹಂಕ ವ್ಯಾಪ್ತಿಯಲ್ಲಿ 10 ಮುಖ್ಯ ರಸ್ತೆಗಳು, ಯಲಹಂಕ ಉಪನಗರ ವ್ಯಾಪ್ತಿಯಲ್ಲಿ 13 ಮುಖ್ಯ ರಸ್ತೆಗಳನ್ನು ಬ್ಲಾಕ್‌ ಮಾಡಲಾಗಿದೆ. ಕೊಡಿಗೇಹಳ್ಳಿ ವ್ಯಾಪ್ತಿಯಲ್ಲಿ 17 ಮುಖ್ಯ ರಸ್ತೆಗಳನ್ನು, ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ 15 ಮುಖ್ಯ ರಸ್ತೆಗಳನ್ನು, ಸಂಪಿಗೆಹಳ್ಳಿ ವ್ಯಾಪ್ತಿಯಲ್ಲಿ 10 ಮುಖ್ಯ ರಸ್ತೆಗಳನ್ನು, ಬಾಗಲೂರು ವ್ಯಾಪ್ತಿಯಲ್ಲಿ 8 ಮುಖ್ಯ ರಸ್ತೆಗಳನ್ನು ಮುಚ್ಚಲಾಗಿದೆ.

ಕೊತ್ತನೂರು ವ್ಯಾಪ್ತಿಯಲ್ಲಿ 10 ಮುಖ್ಯ ರಸ್ತೆಗಳನ್ನು ಬಂದ್‌ ಮಾಡಲಾಗಿದ್ದು, ಅಮೃತಹಳ್ಳಿ ವ್ಯಾಪ್ತಿಯಲ್ಲಿ 10 ಮುಖ್ಯ ರಸ್ತೆಗಳನ್ನು, ದೇವನಹಳ್ಳಿ ವ್ಯಾಪ್ತಿಯಲ್ಲಿ 15 ಮುಖ್ಯ ರಸ್ತೆಗಳನ್ನು ಮುಚ್ಚಲಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1 ಮುಖ್ಯ ರಸ್ತೆಯನ್ನು, ಚಿಕ್ಕಜಾಲ ವ್ಯಾಪ್ತಿಯಲ್ಲಿ 10 ಮುಖ್ಯ ರಸ್ತೆಗಳನ್ನು ಮುಚ್ಚಿ ಈಶಾನ್ಯ ಡಿಸಿಪಿ ಡಾ.ಭೀಮಾಶಂಕರ್‌ ಗುಳೇದ್‌ ಆದೇಶ ಹೊರಡಿಸಿದ್ದಾರೆ.

ಈಶಾನ್ಯ ವಲಯದಲ್ಲಿ ಒಂದೇ ಕೊರೋನಾ ಕೇಸ್‌ ಇದ್ದರೂ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಗಳನ್ನು ಮುಚ್ಚಿದ್ದಾರೆ. ಈ ಮೂಲಕ ಜನರ ಓಡಾಟಕ್ಕೆ ನಿರ್ಬಂಧ ಹಾಕಿದ್ದಾರೆ. ಜನರು ಅಗತ್ಯ ವಸ್ತುಗಳಿಗಾಗಿ ತಮ್ಮ ಏರಿಯಾದಲ್ಲಿರುವ ಅಂಗಡಿ, ಮೆಡಿಕಲ್‌ಗಳಿಗೆ ಹೋಗಬೇಕು, ತಮ್ಮ ಏರಿಯಾ ಬಿಟ್ಟು ಬೇರೆ ಏರಿಯಾಗಳಿಗೆ ಹೋಗದಂತೆ ಮನವಿ ಮಾಡಿದ್ದಾರೆ.

ಬ್ಲಾಕ್‌ ಆಗಿರುವ ರೋಡ್‌ಗಳ ಲಿಸ್ಟ್‌ಗಾಗಿ ಇಲ್ಲಿ ಈ ಕೆಳಗೆ ಕ್ಲಿಕ್‌ ಮಾಡಿ

BENGALURU ROAD LIST

LEAVE A REPLY

Please enter your comment!
Please enter your name here