ಬುಧವಾರ ಭಾರತ್ ಬಂದ್.. ರಾಜ್ಯದಲ್ಲಿ ಏನಿರುತ್ತೆ..? ಏನಿರಲ್ಲ..?

ಕೇಂದ್ರ ಕಾರ್ಮಿಕ ಸಂಘಟನೆಗಳು ಬುಧವಾರ ಭಾರತ್ ಬಂದ್‍ಗೆ ಕರೆಕೊಟ್ಟಿದೆ. ಸರ್ಕಾರಿ ನೌಕರರು, ಬ್ಯಾಂಕ್ ಉದ್ಯೋಗಿಗಳು, ಶಿಕ್ಷಕರು, ಉಕ್ಕು ಮತ್ತು ರೈಲ್ವೇ ವಲಯಗಳ ಕಾರ್ಮಿಕ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿವೆ. ದೇಶದ ಕೋಟ್ಯಂತರ ಕಾರ್ಮಿಕರು ಬೀದಿಗಿಳಿದು ಕೇಂದ್ರ ಸರ್ಕಾರದ ಆಕ್ರೋಶ ಹೊರಹಾಕಲಿದ್ದಾರೆ. ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಭಾರತ್ ಬಂದ್‍ಗೆ ಕರೆ ನೀಡಲಾಗಿದೆ.

ಮುಷ್ಕರದಲ್ಲಿ ಯಾರೆಲ್ಲಾ ಪಾಲ್ಗೊಳ್ತಾರೆ..?
ಕೈಗಾರಿಕಾ ವಲಯದ ಕಾರ್ಮಿಕ ಸಂಘಟನೆಗಳು, ಮಹಿಳೆಯರು, ರೈತರು ಈ ಮುಷ್ಕರದ ಭಾಗವಾಗಿರಲಿದ್ದಾರೆ. ಎಡಪಕ್ಷಗಳು, ಕೇಂದ್ರ ಕಾರ್ಮಿಕ ಸಂಘಟನೆಗಳು ಈ ಮುಷ್ಕರಕ್ಕೆ ತಮ್ಮ ಬೆಂಬಲ ಇದೆ ಎಂದು ಘೋಷಿಸಿವೆ.

> ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್
> ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್
> ಆಲ್ ಇಂಡಿಯಾ ಟ್ರೇಡ್ ಇಂಡಿಯನ್ ಕಾಂಗ್ರೆಸ್
> ಹಿಂದ್ ಮಜ್ದೂರ್ ಸಭಾ
> ಎಲ್‍ಪಿಎಫ್
> ಗಾರ್ಮೆಂಟ್ಸ್ ವರ್ಕರ್ಸ್ ಅಸೋಸಿಯೇಷನ್
> ಸೆಲ್ಫ್ ಎಂಪ್ಲಾಯ್ಡ್ ವುಮೆನ್ ಅಸೋಸಿಯೇಷನ್
> ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್
> ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್
> ಟ್ರೇಡ್ ಯೂನಿಯನ್ ಕೋ ಆರ್ಡಿನೇಷನ್ ಸೆಂಟರ್
> ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್

ರಾಜ್ಯದಲ್ಲಿ ಏನೇನು ಇರಲ್ಲ
* ಓಲಾ, ಊಬೆರ್
* ಆಟೋ ರಿಕ್ಷಾ
* ವಾಣಿಜ್ಯ ಟ್ಯಾಕ್ಸಿಗಳು
* ಬ್ಯಾಂಕ್ ಸೇವೆಗಳು
* ಎಟಿಎಂ ಸೇವೆಗಳು
* ಗಾರ್ಮೆಂಟ್ಸ್
* ಹೋಲ್‍ಸೇಲ್ ಮಾರ್ಕೇಟ್
* ಕೃಷಿ ಮಾರುಕಟ್ಟೆ
* ಶಾಲೆ, ಕಾಲೇಜು ರಜೆ (ಪರಿಸ್ಥಿತಿ ನೋಡಿಕೊಂಡು ಶಾಲಾ/ಕಾಲೇಜು ಆಡಳಿತ ಮಂಡಳಿಗಳಿಗೆ ನಿರ್ಣಯ ಕೈಗೊಳ್ಳುವ ಅಧಿಕಾರ)

ಏನೇನು ಇರುತ್ತವೆ?
* ಬಿಎಂಟಿಸಿ ಬಸ್ ಸೇವೆ
* ಕೆಎಸ್‍ಆರ್‍ಟಿಸಿ
* ನಮ್ಮ ಮೆಟ್ರೋ ಸೇವೆ
* ಹಾಲು
* ಪೇಪರ್
* ಆಸ್ಪತ್ರೆ
* ಆಂಬ್ಯುಲೆನ್ಸ್
* ಮೆಡಿಕಲ್ ಶಾಪ್

ಬಂದ್‍ಗೆ ಕರೆ ಕೊಟ್ಟವರ ಬೇಡಿಕೆಗಳೇನು..?
* ಕಾರ್ಮಿಕ ಕಾಯ್ದೆಯ ತಿದ್ದುಪಡಿಯಲ್ಲಿ ಹಲವು ಅಂಶಗಳನ್ನು ತೆಗೆಯಬೇಕು
* 44 ಕಾರ್ಮಿಕ ಕಾನೂನು ಬದಲು ನಾಲ್ಕು ಕೋಡ್ ಮಾಡಲು ಹೊರಟಿದ್ದೀರಾ
* ಆದರೆ, ಇದು ಕಾರ್ಮಿಕರ ಹಿತ ಕಾಯವುದಿಲ್ಲ.. 4 ಕೋಡ್ ಬೇಡ
* ಉದ್ಯಮಿಗಳ ಪರವಾಗಿ ಈ ಕಾಯ್ದೆಗಳು ಇವೆ.
* ಕಾರ್ಮಿಕ ಸಂಘಟನೆಗಳನ್ನು ಕಡೆಗಣಿಸಲಾಗುತ್ತಿದೆ
* ಕಾರ್ಮಿಕರ ಕಲ್ಯಾಣಕ್ಕೆ ಒತ್ತು ನೀಡಬೇಕು
* ಕಾರ್ಮಿಕರ ಕನಿಷ್ಠ ವೇತನ 21ರಿಂದ 24,000 ರೂ.ಗೆ ಹೆಚ್ಚಿಸಬೇಕು
* ಬ್ಯಾಂಕುಗಳ ಖಾಸಗೀಕರಣ ನಿಲ್ಲಿಸಬೇಕು
* ಎನ್‍ಆರ್‍ಸಿ, ಸಿಎಎ ಕಾಯ್ದೆಗಳನ್ನು ವಾಪಸ್ ಪಡೆಯಬೇಕು

LEAVE A REPLY

Please enter your comment!
Please enter your name here