ಬೀದಿ ಬದಿ ವ್ಯಾಪಾರಿಗಳಿಗೆ  10 ಸಾವಿರ ರೂಪಾಯಿ ಸಾಲ – ಆತ್ಮನಿರ್ಭರ ನಿಧಿಗೆ ಅನುಮೋದನೆ

ಬೀದಿ ಬದಿ ವ್ಯಾಪಾರಿಗಳಿಗೆ  10 ಸಾವಿರ ರೂಪಾಯಿ ಸಾಲ ನೀಡುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನುಮೋದನೆ ನೀಡಿದೆ.

ಮೇ 12 ರಂದು ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್‌ ಘೋಷಿಸಿದ್ದ ಭಾಗವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋಜನೆಯನ್ನು ಪ್ರಸ್ತಾಪಿಸಿದರು.

ಈ ನಿಧಿಗೆ ಪ್ರಧಾನಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರನಿಧಿ ಎಂದು ನಾಮಕರಣ ಮಾಡಲಾಗಿದ್ದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಡಿ ಸೂಕ್ಷ್ಮ ಸಾಲವನ್ನು ನೀಡಲಾಗುತ್ತದೆ.

ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ಎಲ್ಲಾ ರೀತಿಯ ಅಂದರೆ ಹಣ್ಣು, ಹೂ, ತರಕಾರಿ, ಟೀ, ತಿಂಡಿ-ತಿನಿಸು, ಟೀ, ಬಟ್ಟೆ, ಚಪ್ಪಲಿ, ಕರಕುಶಲ ವಸ್ತುಗಳು, ಬುಕ್‌, ಸಲೂನ್‌ ಶಾಪ್‌, ಪಾನ್‌ ಶಾಪ್‌ ಮತ್ತು ಡ್ರೈಕ್ಲಿನಿಂಗ್‌ ಸೇರಿದಂತೆ 50 ಲಕ್ಷ ವ್ಯಾಪಾರಿಗಳು ಸಾಲಸೌಲಭ್ಯ ಪಡೆಯಬಹುದಾಗಿದೆ.

ವ್ಯಾಪಾರದ ವೇಳೆ ಡಿಜಿಟಲ್‌ ಮೂಲಕ ವ್ಯವಹಾರ ಮಾಡಿದ್ರೆ ಆಗ ಬೀದಿ ಬದಿ ವ್ಯಾಪಾರಿಗಳಿಗೆ ಹಣ ವಾಪಸ್‌ ಮೂಲಕ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

LEAVE A REPLY

Please enter your comment!
Please enter your name here