ಬಿಬಿಕೆ9: ದೊಡ್ಮನೆಯಿಂದ ಹೊರಬಂದ ಪುಟ್ಟ ಗೌರಿ

ಪುಟ್ಟಗೌರಿ ಖ್ಯಾತಿಯ ಸಾನಿಯಾ ಅಯ್ಯರ್ ಈ ವಾರ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಿಗ್‌ ಬಾಸ್ ಓಟಿಟಿ ಸೀಸನ್‌ನಲ್ಲಿ ಎಂಟ್ರಿಯಾಗಿದ್ದ ಸಾನಿಯಾ ಅಯ್ಯರ್‌ ನಂತರ ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ, ರಾಕೇಶ್ ಅಡಿಗ ಅವರ ಜತೆ ಟಿವಿ ಬಿಗ್‌ ಬಾಸ್‌ ಶೋಗೆ ಸೆಲೆಕ್ಟ್ ಆಗಿದ್ದರು. ಇದೀಗ ಆರನೇ ಸ್ಪರ್ಧಿಯಾಗಿ ಬಿಗ್ ಬಾಸ್ ಶೋನಿಂದ ಹೊರಬಂದಿದ್ದಾರೆ.

ಕಿರುತೆರೆಯಲ್ಲಿ ಪುಟ್ಟಗೌರಿಯಾಗಿ ಖ್ಯಾತಿ ಗಳಿಸಿದ್ದ ಸಾನ್ಯ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ತಮ್ಮ ನೇರ ಮಾತಿನ ಮೂಲಕ ತಮ್ಮದೇ ಶೈಲಿಯಲ್ಲಿ ಆಟವನ್ನು ಆಡಿದ್ದರು.

ಓಟಿಟಿ ಹಾಗೂ ಟಿವಿ ಬಿಗ್‌ ಬಾಸ್‌ನ ಮೊದಲ ಮೂರು ವಾರದಲ್ಲಿ ಟಾಸ್ಕ್‌ ಅಲ್ಲದೆ ಎಲ್ಲರ ಜತೆ ಹೊಂದಿಕೊಂಡು ಮನರಂಜನೆ ನೀಡಿ ಕನ್ನಡಿಗರ ಮನ ಗೆದ್ದಿದ್ದರು. ಆದರೆ ಕಳೆದ ಎರಡು ವಾರದಲ್ಲಿ ಸಾನ್ಯ ಅವರು ತಮ್ಮ ಆಟಕ್ಕೆ ಸ್ವಲ್ಪ ಬ್ರೇಕ್ ನೀಡಿ, ಸೈಲೆಂಟ್ ಆಗಿದ್ದರು.