ಬಿಜೆಪಿ ಸೇರಿದ ಕಾಡುಗಳ್ಳ ವೀರಪ್ಪನ್ ಪುತ್ರಿ..!

ಕುಖ್ಯಾತ ಕಾಡುಗಳ್ಳ, ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿ ಕಮಲ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಮುರಳಿಧರ್ ರಾವ್, ಕೇಂದ್ರದ ಮಾಜಿ ಮಂತ್ರಿ ಪೋನ್ ರಾಧಾಕೃಷ್ಣನ್ ಸಮ್ಮುಖದಲ್ಲಿ ವೀರಪ್ಪನ್ ಪುತ್ರಿ ವಿದ್ಯಾರಾಣಿ ಕಮಲದ ಬಾವುಟ ಹಿಡಿದರು. ವಿದ್ಯಾರಾಣಿ ಅವರೊಂದಿಗೆ 1 ಸಾವಿರಕ್ಕೂ ಹೆಚ್ಚು ಮಂದಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಎಲ್‍ಎಲ್‍ಬಿ ಪದವಿಧರೆ ವಿದ್ಯಾರಾಣಿ, ನಮ್ಮ ತಂದೆ ವೀರಪ್ಪನ್‍ಗೂ ಜನಸೇವೆ ಮಾಡುವ ಹಂಬಲ ಇತ್ತು. ಆದರೆ ತಪ್ಪು ಮಾರ್ಗದಲ್ಲಿ ಪ್ರಯಾಣಿಸಿ, ಅನಾಹುತ ಮಾಡಿಕೊಂಡರು ಎಂದು ತಿಳಿಸಿದ್ದಾರೆ.

ವಿದ್ಯಾರಾಣಿ ಹಿನ್ನೆಲೆ ಏನು ನೋಡೋಣ
> ವಯಸ್ಸು -29
> ತಂದೆ – ವೀರಪ್ಪನ್
> ತಾಯಿ – ಮುತ್ತುಲಕ್ಷ್ಮಿ
> ಪತಿ – ಮರಿಯಾ ದೀಪಕ್
> ಪತಿಗೆ ವಿಚ್ಛೇದನ ನೀಡಿ, ಮತ್ತೆ ಅವರೊಂದಿಗೆ ಜೀವನ ನಡೆಸುತ್ತಿರುವ ವಿದ್ಯಾರಾಣಿ
> ವಿದ್ಯಾರ್ಹತೆ – ಪದವಿಧರೆ
> ವಣ್ಣಿಯಾರ್ ಸಮುದಾಯದ ಪರ ಹೋರಾಟ
> ಕೃಷ್ಣಗಿರಿ ಬಡಮಕ್ಕಳಿಗೆ ಉಚಿತ ಟ್ಯೂಷನ್
> 2 ವರ್ಷದಿಂದಲೇ ಬಿಜೆಪಿಗೆ ಸೇರ್ಪಡೆ ಆಗುವಂತೆ ಒತ್ತಡ
> ಪೋನ್ ರಾಧಾಕೃಷ್ಣನ್ ಒತ್ತಾಯದ ಮೇರೆಗೆ ಬಿಜೆಪಿಗೆ ಸೇರ್ಪಡೆ

LEAVE A REPLY

Please enter your comment!
Please enter your name here