ಬಿಜೆಪಿ ಸಂಸದರ ಪ್ರಚೋದನೆ ಬೆನ್ನಲ್ಲೇ ಜಾಮಿಯಾ ವಿವಿ ಬಳಿ ಶೂಟೌಟ್

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಇಂದು ಮಧ್ಯಾಹ್ನ  ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಗೆ ಪ್ರತಿಭಟನೆಯಲ್ಲಿ ನಿರತನಾಗಿದ್ದ ಜಾಮಿಯಾ ವಿದ್ಯಾರ್ಥಿ ಶದಾಬ್‌  ಫಾರೂಕ್‌ ಗಾಯಗೊಂಡಿದ್ದಾನೆ.

ಗುಂಡಿನ ಧಾಳಿ ನಡೆಸುವ ಮೊದಲು ಧಾಳಿಕೋರ ರಾಮ್‌ ಭಗತ್‌ ಗೋಪಾಲ್‌ ಶರ್ಮಾ ಫೇಸ್ಬುಕ್‌ ನಲ್ಲಿ ಲೈವ್‌ ಬಂದು ಹಿಂದೂಸ್ತಾನ್ ಜಿಂದಾಬಾದ್ ; ದಿಲ್ಲಿ ಪೋಲೀಸ್ ಜಿಂದಾಬಾದ್ . ಯೇ ಲೋ ಆಜಾಧಿ ಅಂತ ಕೂಗುತ್ತಲೇ ವಿಧ್ಯಾರ್ಥಿಗಳೆಡೆಗೆ ಶೂಟ್ ಮಾಡಿದ್ದಾನೆ.

 

ಜಾಮಿಯಾ ಸಮನ್ವಯ ಸಮಿತಿ (ಜೆಸಿಸಿ) ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಜಾಮಿಯಾ ಪ್ರದೇಶದಿಂದ ರಾಜ್ ಘಾಟ್‌ಗೆ ಮೆರವಣಿಗೆ ಆಯೋಜಿಸಿದ ದಿನ ಇದು ಸಂಭವಿಸಿದೆ.

ಗಾಯಾಳು ಶದಾಬ್‌ ಬ್ಯಾರಿಕೇಡ್‌ ದಾಟುತ್ತಿರುವ ದೃಶ್ಯ

ಕಳೆದ ತಿಂಗಳು ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪೌರತ್ವ ಕಾನೂನನ್ನು ವಿರೋಧಿಸಿ ಹಿಂಸಾಚಾರ ನಡೆದಿತ್ತು; ವಿದ್ಯಾರ್ಥಿಗಳ ಮೇಲೆ ಪೊಲೀಸರು ಮಿತಿಮೀರಿದ ಬಲವನ್ನು ಬಳಸಿದ್ದರು. ಈ ತಿಂಗಳ ಆರಂಭದಲ್ಲಿ, ಮುಖವಾಡದ ಗೂಂಡಾಗಳು ಜೆಎನ್‌ಯುನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿ ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದರು.

LEAVE A REPLY

Please enter your comment!
Please enter your name here