ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಮನೆ ಎದುರು ಪ್ರತಿಭಟನೆಗೆ ಜಮೀರ್ ಗೆ ಅನುಮತಿಯಿಲ್ಲ..!

ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಬಳ್ಳಾರಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಸೋಮವಾರದೊಳಗೆ ಅಂದರೆ ನಾಳೆಯೊಳಗೆ ಸೋಮಶೇಖರರೆಡ್ಡಿ ಬಂಧಿಸದಿದ್ದರೆ ಬಳ್ಳಾರಿಯಲ್ಲಿರುವ ರೆಡ್ಡಿ ಮನೆಯೆದುರು ಪ್ರತಿಭಟನೆ ಮಾಡುವುದಾಗಿ ಜಮೀರ್ ಘೋಷಿಸಿದ್ದರು.

ಈ ಸಂಬಂಧ ಬಳ್ಳಾರಿ ಎಸ್ಪಿ ಸಿ ಕೆ ಬಾಬಾ ಪ್ರತಿಕ್ರಿಯೆ ನೀಡಿದ್ದು ಶಾಸಕ ಜಮೀರ್ ಅವರಿಗೆ ನಾಳೆ ಪ್ರತಿಭಟನೆಗೆ ಅವಕಾಶ ಇಲ್ಲ. ನನಗೆ ಅವಕಾಶ ಕೊಡಿ ಎಂದು ಎಸ್ಪಿ ಕಚೇರಿಗೆ ಮನವಿ ಮಾಡಿದ್ದರು. ನಾವು ಸೀಲ್ ಹಾಕಿ ಕೊಟ್ಟಿದ್ದೇವೆ. ಸೀಲ್ ಹಾಕಿ ಕೊಟ್ಟಿದ್ದೇವೆ ಎಂದಮಾತ್ರಕ್ಕೆ ಅನುಮತಿ ಕೊಟ್ಟಿದ್ದೇವೆ ಎಂದು ಅರ್ಥವಲ್ಲ ನಾಳೆ ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮಶೇಖರ ರೆಡ್ಡಿ ವಿರುದ್ಧ ತನಿಖೆ ನಡೆಯುತ್ತಿದ್ದು ಹೆಚ್ಚಿನ ಸಾಕ್ಷಾಧಾರಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಬಗ್ಗೆ ಆದಷ್ಟು ಬೇಗ ಆರೋಪಪಟ್ಟಿ ಸಲ್ಲಿಸಲಾಗುತ್ತದೆ ಬಳ್ಳಾರಿ ಜಿಲ್ಲೆ ಕೋಮುಸೌಹಾರ್ದತೆ ಹೆಸರುವಾಸಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುದ್ದಿಗೆ ಕಿವಿಗೊಡುವುದು ಸರಿಯಲ್ಲ ಎಂದು ಎಸ್ಪಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here