ಬಿಜೆಪಿ ಶಾಸಕರ ಪುತ್ರನಿಂದ ಲಾಕ್‌ಡೌನ್ ಉಲ್ಲಂಘನೆ.. ಹೈವೇಯಲ್ಲಿ ಕುದುರೆ ಸವಾರಿ

ಲಾಕ್‌ಡೌನ್ ಹೊತ್ತಲ್ಲಿ ಬಿಜೆಪಿ ಶಾಸಕರ ಪುತ್ರರೊಬ್ಬರು ನಿಯಮಗಳ ಉಲ್ಲಂಘನೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಅವರ ಪುತ್ರ ಭುವನ್ ಕುಮಾರ್ ಹೆದ್ದಾರಿಯಲ್ಲಿ ಕುದುರೆ ಸವಾರಿ ಮಾಡಿದ್ದಾರೆ.

ರೇಸ್ ಜಾಕಿಯ ರೀತಿಯಲ್ಲಿ ಭುವನ್ ಕುದುರೆ ಸವಾರಿ ಮಾಡಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಇದು ಬೇಕಿತ್ತಾ..? ಒಬ್ಬರಲ್ಲಿ ಜಾಗೃತಿ ಮೂಡಿಸಬೇಕಾದವರೇ ಹೀಗೆ ಮಾಡಿದರೇ ಏನು ಕಥೆ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ಕೇಳಿಬಂದಿದೆ.

LEAVE A REPLY

Please enter your comment!
Please enter your name here