ಬಿಜೆಪಿ ಶಾಸಕರಿಗೆ ಶಾಕ್‌ ಕೊಟ್ಟ ಯಡಿಯೂರಪ್ಪ..!

ಎರಡನೇ ಸಂಪುಟ ವಿಸ್ತರಣೆಯಲ್ಲಾದರೂ ಸಚಿವ ಸ್ಥಾನ ಸಿಗುತ್ತದೆ ಎಂದು ಕನಸು ಕಟ್ಟಿಕೊಂಡಿರುವ ಬಿಜೆಪಿ ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಆಘಾತ ನೀಡಿದ್ದಾರೆ.

ಉಪ ಚುನಾವಣೆಯಲ್ಲಿ ಗೆದ್ದವರನ್ನಷ್ಟೇ ಮಂತ್ರಿ ಮಾಡಲಾಗುತ್ತದೆ. ಉಳಿದ ಇಬ್ಬರೋ ಒಬ್ಬರನ್ನು ಮಂತ್ರಿ ಮಾಡಬಹುದು. ಯಾರೋ ಸಚಿವ ಸ್ಥಾನದ ಆಕ್ಷೇಪ ಇಟ್ಟುಕೊಂಡಿದ್ದೇವೆ ಎಂದು ಹೇಳಿದರೆ ನಾನೇನೂ ಮಾಡಲು ಆಗುವುದಿಲ್ಲ. ಡಿಸೆಂಬರ್‌ ೨೧ ಅಥವಾ ೨೨ರಂದು ದೆಹಲಿಗೆ ಹೋಗಿ ಹೈಕಮಾಂಡ್‌ ಜೊತೆ ಮಾತುಕತೆ ನಡೆಸ್ತೇನೆ. ಡಿಸೆಂಬರ್‌ ತಿಂಗಳ ಕೊನೆಗೆ ಸಂಪುಟ ವಿಸ್ತರಣೆ ಮಾಡಲಾಗುತ್ತದೆ

ಎಂದು  ಬೆಂಗಳೂರಲ್ಲಿ ಯಡಿಯೂರಪ್ಪ ಹೇಳಿದ್ದಾರೆ.

ಅನರ್ಹ ಶಾಸಕರಲ್ಲಿ ೧೧ ಮಂದಿ ಗೆದ್ದು ಬಂದಿದ್ದಾರೆ. ಅವರನ್ನು ಮಂತ್ರಿ ಮಾಡುವುದಾಗಿ ಈಗಾಗಲೇ ಯಡಿಯೂರಪ್ಪ ಮಾತುಕೊಟ್ಟಾಗಿದೆ. ಸೋತ ಇಬ್ಬರಾದ ಎಚ್‌ ವಿಶ್ವನಾಥ್‌ ಮತ್ತು ಎಂ ಟಿ ಬಿ ನಾಗರಾಜ್‌ ಮತ್ತು ರಾಣೇಬೆನ್ನೂರು ಕ್ಷೇತ್ರದಿಂದ ಟಿಕೆಟ್‌ ವಂಚಿತರಾಗಿರುವ ಶಂಕರ್‌ರನ್ನೂ ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ವಾಗ್ದಾನ ಮಾಡಿದ್ದಾರೆ.

ಸದ್ಯಕ್ಕೆ ೧೩ ಸಚಿವ ಸ್ಥಾನಗಳನ್ನಷ್ಟೇ ಖಾಲಿ ಇದ್ದು, ವಲಸೆ ಬಂದಿರುವವರ ಪಾರುಪತ್ಯವೇ ಮೇಲಾದಲ್ಲಿ ಬಿಜೆಪಿ ಶಾಸಕರ ಆಕಾಶವನ್ನಷ್ಟೇ ನೋಡಬೇಕಾಗುತ್ತದೆ.

LEAVE A REPLY

Please enter your comment!
Please enter your name here