ಬಿಜೆಪಿಯ ಅತೃಪ್ತರು ಹೇಳುವ ಆ ಸಿಡಿಯಲ್ಲಿ ಭಜನೆ, ಹಾಡು ಇರಬಹುದು – ಅರುಣ್ ಸಿಂಗ್

ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದ ಹಲವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಿಡಿ ಆರೋಪ ಮಾಡಿದ್ದರು.ಹೈಕಮಾಂಡ್ ಮಟ್ಟದವರೆಗೂ ದೂರು ಒಯ್ಯುವ ಮಾತನ್ನಾಡಿದ್ದರು. ಆದರೇ, ಈವರೆಗೂ ಯಾರು ಈ ಸಾಹಸವನ್ನು ಮಾಡಿಲ್ಲ.

ಈವರೆಗೆ ಯಾವುದೇ ನಾಯಕರು ತಮ್ಮ ಬಳಿ ಸಿಡಿ ವಿಚಾರ ಪ್ರಸ್ತಾಪಿಸಿಯೇ ಇಲ್ಲ. ನನಗೂ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಹುಷಃ ಅತೃಪ್ತರು ಹೇಳುವ ಸಿಡಿಯಲ್ಲಿ ಹಾಡು ಭಜನೆ, ಇರಬಹುದು ಅಷ್ಟೇ.. ಆರೋಪ ಮಾಡುವ ಯತ್ನಾಳ್ ಹಿನ್ನೆಲೆ ಎಲ್ಲರಿಗೂ ಗೊತ್ತಿರುವಂಥಾದ್ದೇ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದ್ದಾರೆ.

ಸದ್ಯಕ್ಕೆ ಸಂಪುಟ ಪುನಾರಚನೆ ಮಾಡುವ ಯಾವುದೇ ಪ್ರಸ್ತಾವ ಬಿಜೆಪಿ ಹೈಕಮಾಂಡ್ ಮುಂದೆ ಇಲ್ಲ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಅತೃಪ್ತರ ಅಸೆಗಳಿಗೆ ತಣ್ಣೀರು ಎರಚಿದ್ದಾರೆ.

ಜೊತೆಗೆ ಸಂಪುಟಕ್ಕೆ ಇಂಥವರನ್ನೇ ತೆಗೆದುಕೊಳ್ಳಬೇಕು ಎಂದು ಹೈಕಮಾಂಡ್ ಹೇಳಿಲ್ಲ. ಯಡಿಯೂರಪ್ಪ ಹೇಳಿದವರಿಗೆ ಹೈಕಮಾಂಡ್ ಮಣೆ ಹಾಕಿದೆ. ಅಸಲಿಗೆ ಯಡಿಯೂರಪ್ಪ ಯಾವುದೇ ಸಚಿವರ ಪಟ್ಟಿಯನ್ನೇ ತಂದಿರಲಿಲ್ಲ ಅಂದ ಮೇಲೆ ಇನ್ನು ಬದಲಾಯಿಸುವುದು ಹೇಗೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಈ ಮೂಲಕ ಸಪ್ತ ಸಚಿವರ ಆಯ್ಕೆ ಯಡಿಯೂರಪ್ಪ ಅವರದ್ದೇ..ಎಂಬ ಸಂದೇಶ ನೀಡಿದ್ದಾರೆ.

LEAVE A REPLY

Please enter your comment!
Please enter your name here