ಬಿಗ್ ಶಾಕಿಂಗ್ ನ್ಯೂಸ್.. 3 ಲಕ್ಷ ಜನ್‍ಧನ್ ಖಾತೆಗಳಿಂದ ಹಣ ವಾಪಸ್..

ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಮಹಿಳೆಯರ ಜನ್‍ಧನ್ ಖಾತೆಗಳಿಗೆ ತಲಾ 500 ರೂ. ಜಮೆ ಮಾಡಲಾಗಿತ್ತು.

ಆದರೆ, ಬ್ಯಾಂಕ್‍ನವರ ತಪ್ಪಿನಿಂದಾಗಿ 3 ಲಕ್ಷ ಮಂದಿಯ ಖಾತೆಗಳಿಗೆ ಹಣ ಹೋಗಿದೆ ಎನ್ನಲಾಗಿದೆ. ಹೀಗಾಗಿ ತೆಲಂಗಾಣ ಒಂದರಲ್ಲೇ ಬರೋಬ್ಬರಿ 16 ಕೊಟಿ ರೂಪಾಯಿ ಹಣವನ್ನು ಜನ್‍ಧನ್ ಖಾತೆಗಳಿಂದ ತೆಲಂಗಾಣ ಗ್ರಾಮೀಣ ಬ್ಯಾಂಕ್ ಹಿಂಪಡೆದಿದೆ.

ಒಟ್ಟು 473 ಬ್ಯಾಂಕ್ ಶಾಖೆಗಳಲ್ಲಿ 9 ಲಕ್ಷ ಮಂದಿಯ ಖಾತೆಗಳಿಗೆ ತಲಾ 500 ರೂ. ಜಮೆ ಮಾಡಲಾಗಿತ್ತು. ಆದರೆ, ಈ ಪೈಕಿ 5,15,260 ಮಂದಿಯಷ್ಟೇ ಅರ್ಹ ಫಲಾನುಭವಿಗಳಂತೆ. ಮಿಕ್ಕವರು ಈ 500 ರೂ. ಪಡೆಯಲು ಅರ್ಹರಲ್ಲ. ಹೀಗಾಗಿ ಅವರ ಖಾತೆಗಳಿಂದ ಹಣ ಹಿಂಪಡೆಯಲಾಗಿದೆ. ಆದರೆ, ಇದರಲ್ಲಿ 1 ಲಕ್ಷ ಮಂದಿ 500 ರೂಪಾಯಿಯನ್ನು ವಿತ್ ಡ್ರಾ ಮಾಡಿದ್ದಾರೆ. ಅವರಿಂದ ಈ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತೆಲಂಗಾಣ ಗ್ರಾಮೀಣ ಬ್ಯಾಂಕ್ ತಿಳಿಸಿದೆ.

LEAVE A REPLY

Please enter your comment!
Please enter your name here