ಬಿಗ್ ಬ್ರೇಕಿಂಗ್.. ಬೆಂಗಳೂರಿನಲ್ಲಿ ಹೆಚ್1 ಎನ್1 ಸೋಂಕು..!

ಚೀನಾ ಸೇರಿದಂತೆ ಜಗತ್ತಿನ ಹಲವು ದೇಶಗಳನ್ನು ಕೋವಿಡ್-19 ವೈರಸ್ ಕಂಗೆಡಿಸಿದೆ. ಸಾವಿರಾರು ಮಂದಿ ಮಹಾಮಾರಿಗೆ ಬಲಿ ಆಗಿದ್ದಾರೆ. ಇತ್ತ ಬೆಂಗಳೂರಿನಲ್ಲಿ ಮತ್ತೆ ಹಂದಿಜ್ವರ ಕಾಣಿಸಿಕೊಂಡಿದೆ. ECOWORLD ಕಂಪನಿಯ ಹಲವರಲ್ಲಿ ಹೆಚ್1ಎನ್1 ಸೋಂಕು ಕಾಣಿಸಿಕೊಂಡಿದೆ.

ಇದು ಹೆಚ್ಚು ಉದ್ಯೋಗಿಗಳಿಗೆ ಸೋಕಬಾರದು ಎನ್ನುವ ಉದ್ದೇಶದಿಂದ ಇಂದಿನಿಂದ ಫೆಬ್ರವರಿ 28ರವರೆಗೆ ಮನೆಯಿಂದಲೇ ಕೆಲಸ ಮಾಡಿ ಕಚೇರಿಗೆ ಬರಬೇಡಿ ಎಂದು ತನ್ನ ಉದ್ಯೋಗಿಗಳಿಗೆ ECOWORLD ಸೂಚಿಸಿದೆ.

ನಿಮ್ಮ ಕುಟುಂಬದ ಸದಸ್ಯರಲ್ಲಿ ಶೀತ ಕೆಮ್ಮು ಜ್ವರದ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಎಂದು ಸಲಹೆ ನೀಡಿದೆ.

LEAVE A REPLY

Please enter your comment!
Please enter your name here