ಬಿಗ್ ನ್ಯೂಸ್; ಶಾಲೆ ಯಾವಾಗ ಪ್ರಾರಂಭ?

ಸೆಪ್ಟೆಂಬರ್ 1ರಿಂದ‌ ಶಾಲೆಗಳು ಆರಂಭ..!

ನವೆಂಬರ್ 14ರೊಳಗೆ ಹಂತ ಹಂತವಾಗಿ ಶಾಲೆಗಳು ಸಂಪೂರ್ಣ ಶುರು..!

ರಾಜ್ಯ ಸರ್ಕಾರಗಳಿಗೆ ಅಂತಿಮ‌ ನಿರ್ಣಯದ ಅಧಿಕಾರ

ಮಾರ್ಗಸೂಚಿ ಪ್ರಕಟಿಸಲು ಕೇಂದ್ರದ ಕಸರತ್ತು

ಕೊರೋನಾ ಕಾರಣದಿಂದ ಶಾಲೆಗಳನ್ನು ತೆರೆಯುವ ಸಂಬಂಧ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ದಪಡಿಸುತ್ತಿದೆ.ಸೆಪ್ಟೆಂಬರದ ಒಂದರಿಂದ ನವೆಂಬರ್ 14ರೊಳಗೆ ಹಂತ ಹಂತವಾಗಿ ಪುನಃ ಪ್ರಾರಂಭಿಸಲು ಕೇಂದ್ರ ಕಸರತ್ತು ನಡೆಸುತ್ತಿದೆ.

ಹಲವು ದೇಶಗಳು ಶಾಲೆ ಓಪನ್ ಮಾಡಿದ ರೀತಿಯನ್ನು, ನಂತರ ಆದ ಪರಿಣಾಮಗಳನ್ನು ಆಧ್ಯಯನ ಮಾಡಿರುವ ಕೇಂದ್ರ ಶಿಕ್ಷಣ ಮಂತ್ರಾಲಯ ಯೋಜನೆ ರೂಪಿಸುತ್ತಿದೆ. ಆದರೆ, ಈ ವಿಚಾರವಾಗಿ ಅಂತಿಮ ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ ಅಧಿಕಾರಿಗಳಿಗೆ ಮೌಖಿಕ ಸೂಚನೆಯೂ ಹೋಗಿದೆ ಎನ್ನಲಾಗುತ್ತಿದೆ.

ಅನ್ ಲಾಕ್ 4ರ ಭಾಗವಾಗಿ ಈ ತಿಂಗಳ ಅಂತ್ಯದೊಳಗೆ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಬಿಡುಗಡೆ ಮಾಡಲಿದೆ. ವಿದ್ಯಾ ಸಂಸ್ಥೆಗಳನ್ನು ತೆರೆಯುವ ವಿಧಾನದ ಬಗ್ಗೆ ವಿವರಣೆ ನೀಡಲಾಗುತ್ತದೆ. ಆಗಸ್ಟ್ 31ರ ನಂತರ ಅನುಸರಿಸುವ ವಿಧಾನಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ಯದೆ.

ಮುಖ್ಯವಾಗಿ ವಿದ್ಯಾರ್ಥಿಗಳು ಯಾವಾಗ, ಯಾವ ವಿಧಾನದಲ್ಲಿ ತರಗತಿಗಳಿಗೆ ಹಾಜರಾಗಬೇಕು ಎಂಬುದನ್ನು ರಾಜ್ಯ ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಕೊರೋನಾ ತೀವ್ರತೆಯನ್ನು ಪರಿಗಣಿಸುವುದರ ಜೊತೆಗೆ ಶಾಲಾ ಶಿಕ್ಷಕರು, ಪೋಷಕರ ಅಭಿಪ್ರಾಯಗಳನ್ನು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳು ಪರಿಗಣಿಸಬೇಕಾಗುತ್ತದೆ.

ಅಲ್ಲದೇ ಬೋಧನಾ ಸಿಬ್ಬಂದಿ, ಶೇಕಡಾ 33ರಷ್ಟು ವಿದ್ಯಾರ್ಥಿಗಳೊಂದಿಗೆ ಪಾಳಿ ಲೆಕ್ಕದಲ್ಲಿ ತರಗತಿಗಳನ್ನು ನಡೆಸಬೇಕು. ತರಗತಿಯ ಕೊಠಡಿಗಳಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ಮಾತ್ರ ಇರಬೇಕು ಎಂದು ಕೇಂದ್ರ‌ ಮಾರ್ಗಸೂಚಿಯಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ.

ಮೊದಲ ಪಾಳಿಯ ತರಗತಿಗಳು ಬೆಳಗ್ಗೆ ಎಂಟರಿಂದ ಹನ್ನೊಂದರವರೆಗೆ, ಎರಡನೇ ಪಾಳಿಯ ತರಗತಿಗಳು ಮಧ್ಯಾಹ್ನ 12ರಿಂದ 3ರವರೆಗೆ ನಿರ್ವಹಿಸಬೇಕು. ಈ ಎರಡರ ಮಧ್ಯೆ ಲಭ್ಯವಾಗುವ ಒಂದು ಗಂಟೆ ಅವಧಿಯಲ್ಲಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಬೇಕು.

ಸೆಪ್ಟೆಂಬರ್ 1ರಿಂದ ಅಂದರೇ ಆರಂಭಿಕ ಹಂತದಲ್ಲಿ 10ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯಕ್ಷ ತರಗತಿಗಳನ್ನು ನಿರ್ವಹಿಸಲು ಅನುಮತಿ ನೀಡಲಾಗುತ್ತದೆ. ಚಿಕ್ಕ ಮಕ್ಕಳಿಗೆ ಆನ್ ಲೈನ್ ನಲ್ಲೇ ತರಗತಿಗಳನ್ನು ಮುಂದುವರೆಸಲಾಗುತ್ತದೆ. ಸೆಕ್ಷನ್ ಗಳ ಪ್ರಕಾರ ಮಕ್ಕಳು ನಿರ್ದಿಷ್ಟ ದಿನದಂದು ಶಾಲೆಗಳಿಗೆ ಹೋಗಿ ಬರಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here