ಬಿಗ್ ನ್ಯೂಸ್; ಕಲಬುರಗಿಯಲ್ಲಿ ಮತ್ತೊಂದು ಕೊರೋನಾ ಕೇಸ್

ಕಲಬುರಗಿಯಲ್ಲಿ ಮತ್ತೊಂದು ಕೊರೋನಾ ಕೇಸ್ ಪತ್ತೆಯಾಗಿದೆ. ಇತ್ತೀಚಿಗೆ ಕೊರೋನಾಗೆ ಬಲಿಯಾಗಿದ್ದ ವೃದ್ಧನ ಪುತ್ರಿಯಲ್ಲಿ ಕೊರೋನಾ ವೈರಸ್ ಕಂಡುಬಂದಿದೆ. ಸಂಜೆ ಬಂದ ವೈರಾಣು ಪರೀಕ್ಷೆ ವರದಿಯಲ್ಲಿ ವೃದ್ಧನ ಪುತ್ರಿಗೆ ಕೊರೋನಾ ಪಾಸಿಟೀವ್ ಇರುವುದು ಖಚಿತವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಬಾಧಿತರ ಸಂಖ್ಯೆ 7ಕ್ಕೆ ಏರಿದೆ.

ಈಗಾಗಲೇ ವೃದ್ಧನ ಪುತ್ರಿಗೆ ಕಲಬುರಗಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಿನ್ನೆ ಸಂಜೆ ವೃದ್ಧನ ಕುಟುಂಬದ ಮೂವರ ವೈರಾಣು ಪರೀಕ್ಷಾ ವರದಿ ಬಂದಿತ್ತು. ಕೊರೋನಾ ನೆಗೆಟೀವ್ ಕಂಡು ಬಂದ ಕಾರಣ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು.

LEAVE A REPLY

Please enter your comment!
Please enter your name here