ಬಿಎಸ್​ವೈ ಪುತ್ರನ ಭ್ರಷ್ಟಾಚಾರದ ಬಗ್ಗೆ ವರದಿ -ಅಧಿಕಾರ ಬಳಸಿ Power TV ಬಂದ್​ ಮಾಡಿಸಿದ ಸಿಎಂ – ಸಿದ್ದರಾಮಯ್ಯ ಖಂಡನೆ

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ ವೈ ವಿಜಯೇಂದ್ರ ಅವರು ಬಿಡಿಎ ಕಾಮಗಾರಿಯಲ್ಲಿ 17 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್​ ಮರಡಿ ಅವರ ಖಾತೆಗೆ 7.4 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ವರದಿ ಮಾಡಿದ್ದ ಕನ್ನಡದ ಸುದ್ದಿ ವಾಹಿನಿ ಪವರ್​ ಟಿವಿಯ ಪ್ರಸಾರಕ್ಕೆ ರಾಜ್ಯ ಸರ್ಕಾರ ಅಡ್ಡಿಪಡಿಸಿದೆ.

ಪವರ್​ ಟಿವಿ ಮಾಲೀಕ ರಾಕೇಶ್​ ಶೆಟ್ಟಿ ವಿರುದ್ಧದ ವಂಚನೆ ಪ್ರಕರಣ ಸಂಬಂಧ ನಿನ್ನೆ ರಾತ್ರಿ ಪೊಲೀಸರು ಪವರ್​ ಟಿವಿ ಕಚೇರಿಯಲ್ಲಿ ಕೋರ್ಟ್​ ಆದೇಶದೊಂದಿಗೆ ಶೋಧ ಕೈಗೊಂಡಿದ್ದರು. ಈ ವೇಳೆ ಸಿಸಿಬಿ ಪೊಲೀಸರು ಟಿವಿ ಕಚೇರಿಯಲ್ಲಿದ್ದ ಉಪಕರಣಗಳನ್ನು ವಶಕ್ಕೆ ಪಡೆದಿದ್ದು, ಆ ಮೂಲಕ ಚಾನೆಲ್​ ತನ್ನ ಪ್ರಸಾರವನ್ನು ಸ್ಥಗಿತಗೊಳಿಸಿದೆ ಎಂದು ಚಾನೆಲ್​ ಹೇಳಿದೆ.

ಇತ್ತ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದು, ಮಗನ ಭ್ರಷ್ಟಾಚಾರದ ವರದಿ ಮಾಡಿದ್ದ ಕಾರಣಕ್ಕೆ ಚಾನೆಲ್​ ಬಂದ್​ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here