ಬಿಎಂಟಿಸಿಯಿಂದ ವಿಶೇಷ ಬಸ್ -“ಬೆಂಗಳೂರು ದರ್ಶಿನಿ”

“ಬೆಂಗಳೂರು ದರ್ಶಿನಿ” ಎಂಬ ಹೆಸರಿನ ವಿಶೇಷ ಬಸ್ ಸೇವೆ ಪ್ರಾರಂಭವಾಗಿದೆ ಈ ಮೂಲಕ ಬೆಂಗಳೂರಿಗೆ ಬರೋ ಪ್ರವಾಸಿಗರಿಗೆ ನಗರದ ಪ್ರೇಕ್ಷಣೀಯ ಸ್ಥಳಗಳನ್ನ ವೀಕ್ಷಿಸಲು ಬಿಎಂಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಂಗಳೂರು ದರ್ಶಿನಿ ಮಾರ್ಗ-1 ಹಾಗೂ ಬೆಂಗಳೂರು ದರ್ಶಿನಿ ಮಾರ್ಗ-2 ಗಳ ಮೂಲಕ ರಾಜಧಾನಿಯ ಎಲ್ಲಾ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಬಸ್ ಗಳು ಸಂಚರಿಸಲಿವೆ.

ವಾರದ 7 ದಿನವೂ ಈ ಬಸ್ ಗಳ ಸಂಚರಿಸಲಿದ್ದು ಪ್ರವಾಸಿಗರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಟಿಕೆಟ್ ದರ ವಯಸ್ಕರಿಗೆ 400ರೂ, ಮಕ್ಕಳಿಗೆ 300ರೂ ಆಗಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗಿದೆ.

ಪ್ರಾಥಮಿಕ, ಪ್ರೌಢಶಾಲಾ, ಮಾಧ್ಯಮಿಕ ಹಾಗೂ ಕಾಲೇಜು ವಿದ್ಯಾರ್ಥಿಗಳು ಬಲ್ಕ್ ಬುಕಿಂಗ್ ಮಾಡಿದಲ್ಲಿ ಒಂದು ಟಿಕೆಟ್ ಗೆ 200 ರೂಪಾಯಿಗೆ ದರ ನಿಗದಿ ಪಡಿಸಲಾಗಿದೆ.

ದುಬಾರಿ ಹಣ ನೀಡಿ ಟ್ಯಾಕ್ಸಿ ಮೂಲಕ ಬೆಂಗಳೂರು ಸುತ್ತಲು ಸಾಧ್ಯವಾಗದವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಪ್ರಾರಂಭಿಸಲಾಗಿದೆ.

LEAVE A REPLY

Please enter your comment!
Please enter your name here