ಬಾವಿಯಲ್ಲಿ 9 ಶವ.. ಸಾಮೂಹಿಕ ಹತ್ಯೆನಾ..? ಸಾಮೂಹಿಕ ಆತ್ಮಹತ್ಯೆನಾ..?

ತೆಲಂಗಾಣದ ವರಂಗಲ್ ನಗರದ ಹೊರವಲಯದಲ್ಲಿರುವ ಪಾಳುಬಾವಿಯೊಂದರಲ್ಲಿ 9 ಮಂದಿಯ ಶವಗಳು ಪತ್ತೆಯಾಗಿವೆ. ನಿನ್ನೆ ನಾಲ್ಕು ಶವ, ಇಂದು 5 ಶವಗಳನ್ನು ಪಾಳುಬಾವಿಯಿಂದ ಹೊರ ತೆಗೆಯಲಾಗಿದೆ.

ಮೃತ 9 ಮಂದಿ ಸಾವು ಸಾಮೂಹಿಕ ಹತ್ಯೆನಾ..? ಸಾಮೂಹಿಕ ಆತ್ಮಹತ್ಯೆನಾ ಎಂಬ ಅನುಮಾನ ಪೊಲೀಸರನ್ನು ಕಾಡಲು ಆರಂಭಿಸಿದೆ.

ಮೃತರನ್ನು ಎಂಡಿ ಮಕ್ಸೂದ್, ಆತನ ಪತ್ನಿ ನಿಷಾ, ಬುಷರಾಖತೂನ್, ಬೇಕಿ ಷಕೀಲ್, ಶಬಾಜ್ ಆಲಂ, ಸೊಹೈಲ್ ಆಲಂ,ಬಿಹಾರ ಮೂಲದ ಕಾರ್ಮಿಕರಾದ ಶ್ರೀರಾಮ್, ಶ್ಯಾಮ್ ಎಂದು ಗುರುತಿಸಲಾಗಿದೆ.

ಮೂಲತಃ ಪಶ್ಚಿಮ ಬಂಗಾಳದ ಮಕ್ಸೂದ್ 20 ವರ್ಷದ ಹಿಂದೆ ಕುಟುಂಬದ ಸಮೇತ ವರಂಗಲ್‍ಗೆ ಬಂದು ಕರಿಮಾಬಾದ್ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿದ್ದು ಬದುಕು ಕಟ್ಟಿಕೊಂಡಿದ್ದರು. ಗೋಣಿಚೀಲದ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರಕ್ಕೆ ಬಂದು ಹೋಗುವುದು ಕಷ್ಟವಿದ್ದ ಕಾರಣ ಗೋಣಿಚೀಲ ಗೋದಾಮಿನಲ್ಲಿರುವ 2 ಕೊಠಡಿಗಳ ಪೈಕಿ ಒಂದರಲ್ಲಿ ಮಕ್ಸೂದ್ ಕುಟುಂಬ ಸಮೇತ ಇದ್ದರು. ಪತಿಯಿಂದ ಬೇರ್ಪಟ್ಟಿದ್ದ ಮಗಳು ಬುಷರಾಖತೂನ್, ತನ್ನ ಮೂರು ವರ್ಷದ ಮಗನೊಂದಿಗೆ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಮತ್ತೊಂದು ಕೊಠಡಿಯಲ್ಲಿ ಬಿಹಾರ ಮೂಲದ ಕಾರ್ಮಿಕರಾದ ಶ್ರೀರಾಮ್, ಶ್ಯಾಮ್ ನೆಲೆಸಿದ್ದರು.

ಗೋಣಿಚೀಲ ಘಟಕದ ಮಾಲೀಕ ಸಂತೋಷ್, ನಿನ್ನೆ ಬೆಳಗ್ಗೆ ಘಟಕಕ್ಕೆ ಬಂದಾಗ ಯಾರು ಕಾಣಲಿಲ್ಲ. ಅಕ್ಕಪಕ್ಕದಲ್ಲಿ ಹುಡುಕಾಡಿದಾಗ ಸಮೀಪದ ಬಾವಿಯಲ್ಲಿ ಹೆಣಗಳು ತೇಲುತ್ತಿರುವುದು ಕಂಡುಬಂದಿತ್ತು.

ನಿನ್ನೆಯಿಂದ ಕಾರ್ಯಾಚರಣೆ ನಡೆಸಿ ಇದೀಗ 9 ಶವಗಳನ್ನು ಹೊರತೆಗೆಯಲಾಗಿದೆ. ಮೇಲ್ನೋಟಕ್ಕೆ ಶವಗಳ ಮೇಲೆ ಯಾವುದೇ ಗಾಯದ ಗುರುತುಗಳು ಕಂಡುಬರದ ಕಾರಣ ಇದು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಸತ್ಯಾಂಶ ಬಯಲಿಗೆ ಬರಲಿದೆ.

LEAVE A REPLY

Please enter your comment!
Please enter your name here