ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ನಿಧನ

ತಮ್ಮ ತಾಯಿಯ ಸಾವಿನ ಬೆನ್ನಲ್ಲೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಇಂದು ಮುಂಬೈನ ಕೋಕಿಲಾಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

54 ವರ್ಷದ ಇರ್ಫಾನ್ ಖಾನ್ ಕಳೆದ ಕೆಲ ವರ್ಷಗಳಿಂದ ನ್ಯೂರೋಎಂಡೋಕ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದರು.  ಇದೀಗ ನಟ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಶನಿವಾರದಂದು ತಾಯಿಯನ್ನು ಕಳೆದುಕೊಂಡ ದಿನ ನಟ ಇರ್ಫಾನ್ ಖಾನ್ ಮುಂಬೈಯಲ್ಲಿ ಉಳಿದಿದ್ದರು. ಕೊರೋನಾ ಲಾಕ್​​ಡೌನ್​​ನಿಂದಾಗಿ ಜೈಪುರಕ್ಕೆ ತೆರಳಲಾಗದೆ ವಿಡಿಯೋ ಕರೆಯ ಮೂಲಕ ತಾಯಿಯ ಅಂತ್ಯ ಸಂಸ್ಕಾರವನ್ನು ವೀಕ್ಷಿಸಿದ್ದರು.

ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಇದು ಕ್ಯಾನ್ಸರ್​ನ ಒಂದು ವಿಧವಾಗಿದೆ. ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಅಪರೂಪದ ಕ್ಯಾನ್ಸರ್ ಇದಾಗಿದೆ.

ಇನ್ನು ಇರ್ಫಾನ್ ಅವರ ನಿಧನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದು, ಟ್ವಿಟ್ಟರ್ ಮೂಲಕ ಅವರನ್ನು ಸ್ಮರಿಸಿದ್ದಾರೆ.

ಕನ್ನಡದ ಹಿರಿಯ ಗಾಂಧೀವಾದಿ, ರಂಗಕರ್ಮಿ ಪ್ರಸನ್ನರವರ ಗ್ರಾಮಸೇವಾಸಂಘ ಆಯೋಜಿಸಿದ್ದ #ಕರೋನಾಕುಚ್ ಅಭಿಯಾನದಲ್ಲೂ ಪಾಲ್ಗೊಂಡು ಕರೋನಾ ರೋಗ ನಿಯಂತ್ರಣ ಕ್ಕೆ ಪ್ರತೀ ಶುಕ್ರವಾರ ಉಪವಾಸ ಮಾಡುತ್ತಿದ್ದರು ಮತ್ತು ಇತರರಿಗೂ ಉಪವಾಸ ಆಚರಿಸಲು ಕರೆ ಕೊಟ್ಟಿದ್ದರು.

 

LEAVE A REPLY

Please enter your comment!
Please enter your name here