ಬಾಲಿವುಡ್‌ ಕ್ವೀನ್ ನ ಪ್ರೊಡಕ್ಷನ್‌ ಹೌಸ್‌ ನೋಡಿದ್ದೀರಾ?

ಬಾಲಿವುಡ್ ಕ್ವೀನ್‌ ಎಂದೇ ಖ್ಯಾತಿಯ ನಟಿ ಕಂಗನಾ ರಣಾವತ್‌ ಇತ್ತೀಚೆಗಷ್ಟೇ ತಮ್ಮದೇ ಆದ ಪ್ರೊಡಕ್ಷನ್‌ ಹೌಸ್‌ನ ಒಡತಿಯಾಗಿದ್ದಾರೆ.  ಕೆಲ ದಿನಗಳ ಹಿಂದಷ್ಟೇ ಉದ್ಘಾಟನೆಗೊಂಡ ಈ ಪ್ರೊಡಕ್ಷನ್‌ ಹೌಸ್‌ ಮುಂಬೈನ ಪಾಲಿ ಹಿಲ್‌ನಲ್ಲಿದೆ.

ಸುಮಾರು 20 ಕೋಟಿ ಬಂಡವಾಳದ ಈ ಪ್ರೊಡಕ್ಷನ್‌ ಹೌಸ್‌  ಕಂಗನಾ ರಣಾವತ್‌ರ ಸುಮಾರು 10 ವರ್ಷಗಳ ಹಿಂದಿನ ಕನಸಿನ ಕೂಸು ಎಂದು ಅವರ ಸಹೋದರಿ ರಂಗೋಲಿ ಹೇಳಿದ್ದಾರೆ.

3 ಅಂತಸ್ತಿನ ಈ ಪ್ರೊಡಕ್ಷನ್‌ ಹೌಸ್ ನ ಹೆಸರು “ಮಣಿಕರ್ಣಿಕಾ ಫಿಲಂಸ್”‌, “ಮಣಿಕರ್ಣಿಕಾ” ಕಂಗನಾ ರಣಾವತ್ ಗೆ ಹೆಸರು ತಂದು ಕೊಟ್ಟ ಸಿನಿಮಾಗಳಲ್ಲೊಂದಾಗಿದೆ. 

LEAVE A REPLY

Please enter your comment!
Please enter your name here