ಬಾಲಿವುಡ್‌ನ‌ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ

ಬಾಲಿವುಡ್‌ನ‌ ಖ್ಯಾತ ಸಂಗೀತ ನಿರ್ದೇಶಕ ವಾಜಿದ್ ಖಾನ್ (ಸಾಜಿದ್ ವಾಜಿದ್)ಇಂದು ನಿಧನರಾಗಿದ್ದಾರೆ. 42 ವರ್ಷದ ವಾಜಿದ್ ಕೆಲ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು ಮತ್ತು ಕೆಲವೇ ತಿಂಗಳುಗಳ ಹಿಂದೆಯಷ್ಟೇ ಕಿಡ್ನಿ ಟ್ರಾನ್ಸ್ ಪ್ಲಾಂಟ್‌ಗೆ ಒಳಗಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಲ್ಮಾನ್ ಖಾನ್ ಅಭಿನಯದ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ವಾಜಿದ್‌ ಖಾನ್‌  ‘ಚೋರಿ ಚೋರಿ’, ‘ಹಲೋ ಬ್ರದರ್’, ‘ಮುಜ್ಸೆ  ಶಾದಿ ಕರೋಗಿ’, ‘ಪಾರ್ಟ್ನರ್’, ‘ವಾಂಟೆಡ್’, ‘ದಬಾಂಗ್’ ಮುಂತಾದ ಚಲನಚಿತ್ರಗಳಿಗೆ ಸಹೋದರ ಸಾಜಿದ್ ಖಾನ್ ಜೊತೆಗೆ ಸೇರಿ ವಾಜಿದ್ ಖಾನ್ ಸಂಗೀತ ಸಂಯೋಜಿಸಿದ್ದರು. ಇತ್ತೀಚೆಗಷ್ಟೇ ಅವರು ಸಲ್ಮಾನ್ ಖಾನ್ ಅವರ ‘ಪ್ಯಾರ್ ಕರೋನಾ’, ‘ಭಾಯಿ ಭಾಯಿ’ ಹಾಡನ್ನು ಸಂಯೋಜನೆ ಮಾಡಿದ್ದರು

ವಾಜಿದ್ ಖಾನ್ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ‌

LEAVE A REPLY

Please enter your comment!
Please enter your name here