ಬಾಬ್ರಿ ಮಸೀದಿ ಬೀಳಿಸಿದ ಕರಸೇವಕರಿಗೆ ವಿಹೆಚ್‍ಪಿ ಸನ್ಮಾನ

1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಬೀಳಿಸಿದ ಕರಸೇವಕರನ್ನು ಸನ್ಮಾನಿಸಲು ವಿಶ್ವ ಹಿಂದೂ ಪರಿಷತ್ ತೀರ್ಮಾನಿಸಿದೆ. ಅಯೋಧ್ಯೆ ಚಳವಳಿಯಲ್ಲಿ ಪಾಲ್ಗೊಂಡಿದ್ದ ಕರಸೇವಕರು ಸಾವನ್ನಪ್ಪಿದ್ದರೇ ಅವರ ಕುಟುಂಬ ಸದಸ್ಯರನ್ನು ವಿಹೆಚ್‍ಪಿ ಸನ್ಮಾನಿಸಲಿದೆ. ಮಾರ್ಚ್ 25ರಿಂದ ಆರಂಭಗೊಳ್ಳಲಿರುವ ರಾಮ ಮಹೋತ್ಸವದ ಭಾಗವಾಗಿ ಆಯೋಧ್ಯೆ ಕರಸೇವಕರನ್ನು ಸನ್ಮಾನಿಸಲು ಹಿಂದೂ ಸಂಘಟನೆ ನಿರ್ಣಯ ಕೈಗೊಂಡಿದೆ.

ದೇಶಾದ್ಯಂತ 3 ಲಕ್ಷ ಗ್ರಾಮಗಳಲ್ಲಿ ಮಾರ್ಚ್ 25ರಿಂದ ಏಪ್ರಿಲ್ 8ರವರೆಗೂ ಅಂದರೇ ಹನುಮಾನ್ ಜಯಂತಿವರೆಗೂ ರಾಮ ಮಹೋತ್ಸವ ಮಾಡಬೇಕೆಂದು.. ರಾಮನ ಸಂದೇಶವನ್ನು ದೇಶಾದ್ಯಂತ ಪ್ರಚಾರ ಮಾಡಬೇಕೆಂದು ತೀರ್ಮಾನಿಸಲಾಗಿದೆ ಎಂದು ವಿಹೆಚ್‍ಪಿಯ ಹಿರಿಯ ಮುಖಂಡರು ತಿಳಿಸಿದ್ದಾರೆ.

ವಿಹೆಚ್‍ಪಿ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಅಲ್ಲಿ ಪ್ರಭಾತ ಭೇರಿ, ಶೋಭಾ ಯಾತ್ರೆ ನಿರ್ವಹಿಸಿ ರಾಮಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲು ವಿಶ್ವಹಿಂದೂ ಪರಿಷತ್ ಮುಂದಾಗಿದೆ.

LEAVE A REPLY

Please enter your comment!
Please enter your name here