ಅವನೇ ಶ್ರೀಮನ್ನಾರಾಯಣ. ಹೊಸ ವರ್ಷಕ್ಕೆ ಕನ್ನಡ ಸಿನಿಮಾ ಲೋಕದಲ್ಲಿ ಅಲೆ ಸೃಷ್ಟಿಸಿದೆ ರಕ್ಷಿತ್ ಶೆಟ್ಟಿ ಮತ್ತು ಶಾನ್ವಿ ಶ್ರೀವಾತ್ಸವ ಮೂವಿ. ಪ್ರೇಕ್ಷಕರ ಮನ ಗೆದ್ದಿರುವ ಎಎಸ್ಎನ್ ಬಾಕ್ಸ್ ಆಫೀಸ್ನಲ್ಲೂ ಧೂಳೆಬ್ಬಿಸಿದೆ. ಶೆಟ್ಟರ ಸಿನಿಮಾ ಗಳಿಕೆಯಲ್ಲಿ ಅರ್ಧಶತಕವನ್ನೇ ದಾಟಿದೆ.
ಫ್ಯಾಂಟಸಿ ಕಥೆಯನ್ನು ಒಳಗೊಂಡಿರುವ ಸಿನಿಮಾ ಬಾಕ್ಸ್ ಅಫೀಸ್ನಲ್ಲಿ ಬರೋಬ್ಬರೀ 65 ಕೋಟಿ ರೂಪಾಯಿ ಗಳಿಸಿದ್ದು, ಇನ್ನೂ ಓಟ ಜೋರಾಗಿಯೇ ಇದೆ.
ಸಿನಿಮಾದ ದಿನವಾರು ಗಳಿಕೆಯನ್ನ ನೋಡೋದಾದ್ರೆ:
ಮೊದಲ ಶುಕ್ರವಾರ- 5.5 ಕೋಟಿ ರೂಪಾಯಿ
ಮೊದಲ ಶನಿವಾರ – 6.2 ಕೋಟಿ ರೂಪಾಯಿ
ಮೊದಲ ಭಾನುವಾರ -7.3 ಕೋಟಿ ರೂಪಾಯಿ
ಮೊದಲ ಸೋಮವಾರ 3.7 ಕೋಟಿ ರೂಪಾಯಿ
ಮೊದಲ ಮಂಗಳವಾರ – 3.6 ಕೋಟಿ ರೂಪಾಯಿ
ಮೊದಲ ಬುಧವಾರ -5.3 ಕೋಟಿ ರೂಪಾಯಿ
ಮೊದಲ ಗುರುವಾರ – 3.1 ಕೋಟಿ ರೂಪಾಯಿ
ಮೊದಲ 1 ವಾರದಲ್ಲಿ 34.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕನ್ನಡದಲ್ಲಿ 33 ಕೋಟಿ ರೂಪಾಯಿ ಮತ್ತು ತೆಲುಗಲ್ಲಿ 1.1 ಕೋಟಿ ರೂಪಾಯಿ ಗಳಿಕೆ ಆಗಿತ್ತು.
ಎರಡನೇ ಶುಕ್ರವಾರ – 2.8 ಕೋಟಿ ರೂಪಾಯಿ
ಎರಡನೇ ಶನಿವಾರ – 3.2 ಕೋಟಿ ರೂಪಾಯಿ
ಎರಡನೇ ಭಾನುವಾರ – 5.2 ಕೋಟಿ ರೂಪಾಯಿ
ಎರಡನೇ ಸೋಮವಾರ -1.6 ಕೋಟಿ ರೂಪಾಯಿ
ಎರಡನೇ ಮಂಗಳವಾರ – 1.38 ಕೋಟಿ ರೂಪಾಯಿ
ಎರಡನೇ ಬುಧವಾರ – 1.26 ಕೋಟಿ ರೂಪಾಯಿ
ಎರಡನೇ ಗುರುವಾರ -0.60 ಕೋಟಿ ರೂಪಾಯಿ
ಎರಡನೇ ವಾರದಲ್ಲಿ 16 ಕೋಟಿ ರೂಪಾಯಿ ಶ್ರೀಮನ್ನನಾರಾಯಣ ಬಾಚಿಕೊಂಡಿದ್ದಾನೆ. ಕನ್ನಡದಲ್ಲಿ 13.5 ಕೋಟಿ ರೂಪಾಯಿ, ತೆಲುಗು 1.17 ಕೋಟಿ ರೂಪಾಯಿ, ತಮಿಳು1.19 ಕೋಟಿ, ಮಲಯಾಳಂ 0.18 ಕೋಟಿ ರೂಪಾಯಿ ಗಳಿಸಿತ್ತು.
ಮೂರನೇ ವಾರದಲ್ಲಿ 3.20 ಕೋಟಿ ರೂಪಾಯಿಯನ್ನ ಎಎಸ್ಎನ್ ಗಳಿಸಿದೆ.
ಕನ್ನಡದಲ್ಲಿ ಜನವರಿ 13 ರವರೆಗೆ 58.44 ಕೋಟಿ ರೂಪಾಯಿ ಗಳಿಸಿದ್ರೆ, ತೆಲುಗಲ್ಲಿ 2.6 ಕೋಟಿ ರೂಪಾಯಿ, ತಮಿಳಲ್ಲಿ 1.35 ಕೋಟಿ ರೂಪಾಯಿ, ಮಲಯಾಳಂನಲ್ಲಿ 21 ಲಕ್ಷ ರೂಪಾಯಿ ಗಳಿಸಿದೆ.
ವಿದೇಶದಲ್ಲಿ ಈಗಾಗಲೇ 3 ಕೋಟಿ ರೂಪಾಯಿ ಬಾಚಿಕೊಂಡಿದ್ದು. ಕಳೆದ 22 ದಿನಗಳಲ್ಲಿ ಅವನೇ ಶ್ರೀಮನ್ನನಾರಾಯಣನ ಹವಾ ಇಳಿದೇ ಇಲ್ಲ.