ಬಸ್‌ ಓಡಿಸ್ತಿದ್ದ ಜಮೀರ್‌ ಫುಟ್‌ಪಾತ್‌ ಗಿರಾಕಿ – ಶಾಸಕ ರೇಣುಕಾಚಾರ್ಯ ವ್ಯಂಗ್ಯ

ಜಮೀರ್‌ ಅಹ್ಮದ್‌ ಖಾನ್‌ ಒಬ್ಬ ಫುಟ್‌ಪಾತ್‌ ಗಿರಾಕಿ ಎಂದು ಮಾಜಿ ಸಚಿವರೂ ಆಗಿರುವ ಹೊನ್ನಾಳಿ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಜಿಲ್ಲೆಯ ಕೆ ಆರ್‌ ನಗರದಲ್ಲಿ ಮಾತಾಡಿದ ಅವರು,

ಜಮೀರ್‌ ಬಸ್‌ ಓಡಿಸಿಕೊಂಡಿದ್ದ. ಅವನನ್ನು ದೇವೇಗೌಡರು ಕರೆದುಕೊಂಡು ಬಂದು ಶಾಸಕರನ್ನಾಗಿ ಮಾಡಿದರು. ಆದರೆ ಜಮೀರ್‌ ದೇವೇಗೌಡರ ಬೆನ್ನಿಗೆ ಚೂರಿ ಇರಿದ. ಅಂಥವನು ನನ್ನ ಬಗ್ಗೆ ಮಾತಾಡುತ್ತಾನೆ

ಎಂದು ತಿರುಗೇಟು ನೀಡಿದರು.

ಪೌರತ್ವ ಕಾಯ್ದೆ ಬೆಂಬಲಿಸಿ ನಾನು ಪ್ರಚೋದನಕಾರಿ ಭಾಷಣ ಮಾಡಿಲ್ಲ. ನನ್ನ ಅಭಿಪ್ರಾಯ ಹೇಳಿದ್ದೇನೆ ಅಷ್ಟೇ. ನಾನು ಕ್ರಿಮಿನಲ್‌ ಕೇಸ್‌ ದಾಖಲಿಸುವ ತಪ್ಪು ಮಾಡಿಲ್ಲ. ಪೌರತ್ವ ಕಾಯ್ದೆ ಜಾರಿಯಾದರೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದು ಮಾಜಿ ಸಚಿವ ಯು ಟಿ ಖಾದರ್‌. ಕಾಂಗ್ರೆಸ್‌-ಜೆಡಿಎಸ್‌ನವರಿಗೆ ತಾಕತ್ತಿದ್ದರೆ ಪ್ರಚೋದನಕಾರಿ ಭಾಷಣ ಮಾಡಿದ ತಮ್ಮ ನಾಯಕರ ವಿರುದ್ಧ ಕ್ರಮಕೈಗೊಳ್ಳಿ. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ

ಎಂದು ರೇಣುಕಾಚಾರ್ಯ ಸವಾಲು ಹಾಕಿದರು.

 

LEAVE A REPLY

Please enter your comment!
Please enter your name here