ಬಸವಕಲ್ಯಾಣದಲ್ಲಿ ಬಿಜೆಪಿಯ ಶರಣು ಸಲಗಾರ್ ಗೆಲುವು

ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಶರಣು ಸಲಗಾರ್ ಕಾಂಗ್ರೆಸ್  ಅಭ್ಯರ್ಥಿ ಬಿ.ಮಾಲಾ ನಾರಾಯಣ ರಾವ್ ವಿರುದ್ದ 20,629 ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವನ್ನು ಸಾಧಿಸಿದ್ದಾರೆ.

ಬಿಜೆಪಿ ಶರಣು ಸಲಗಾರ್, ಕಾಂಗ್ರೆಸ್ ನ ಬಿ.ಮಾಲಾ ನಾರಾಯಣ ರಾವ್, ಹಾಗೂ ಜೆಡಿಎಸ್ ನ ಸೈಯದ್ ಅಲಿಯವರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.  ಇದರ ನಡುವೆಯೇ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ್ ಕೂಬಾ ಸ್ಪರ್ದಿಸಿದ್ದರು.

ಕಾಂಗ್ರೆಸ್​ ನ ಶಾಸಕ ಬಿ.ನಾರಾಯಣ್ ರಾವ್ ಅವರು ಅಕಾಲಿಕ ಮರಣದಿಂದಾಗಿ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ಕಾಂಗ್ರೆಸ್ ಕ್ಷೇತ್ರವಾಗಿದ್ದ ಬಸವಕಲ್ಯಾಣ ಈಗ ಬಿಜೆಪಿ ಕ್ಷೇತ್ರವಾಗಿ ಬದಲಾಗಿದೆ. ಅಧಿಕೃತವಾಗಿ ಬಿಜೆಪಿಯ ಶರಣು ಸಲಗಾರ್ ಬಸವಕಲ್ಯಾಣ ಕ್ಷೇತ್ರದಲ್ಲಿ 71,012 ಮತಗಳನ್ನು ಪಡೆದು. 20,629 ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿ ಬಿ.ಮಾಲಾ ನಾರಾಯಣ್ ರಾವ್ ಅವರು 50,383 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ನ ಸೈಯದ್ ಅಲಿ 11,402 ಮತಗಳನ್ನು ಪಡೆದಿದ್ದಾರೆ. ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ್ ಖೂಬಾ 9457 ಮತಗಖನ್ನು ಪಡೆದಿದ್ದಾರೆ.

 

LEAVE A REPLY

Please enter your comment!
Please enter your name here