ಬದುಕಿನ ಆಟ ಮುಗಿಸಿದ ನಟ ಚಿರಂಜೀವಿ ಸರ್ಜಾ

ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. 39 ವರ್ಷದ ಚಿರಂಜೀವಿ ಸರ್ಜಾ ಅವರಿಗೆ ಕಳೆದ ರಾತ್ರಿ ಅನಾರೋಗ್ಯ ಉಂಟಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲಿದ್ದರು. ಇಂದು ಬೆಳಗ್ಗೆ ಅವರನ್ನು ಸಾಗರ್ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ಹಂತದಲ್ಲೇ ಚಿರಂಜೀವಿ ಸರ್ಜಾಗೆ ತೀವ್ರ ಹೃದಯಾಘಾತವಾಗಿದೆ. ತಜ್ಞ ವೈದ್ಯರ ಚಿಕಿತ್ಸೆ ನಡುವೆಯೂ ಚಿರಂಜೀವಿ ಸರ್ಜಾ ಇಹಲೋಕ ತ್ಯಜಿಸಿದ್ದಾರೆ.

ಇಂದು ಮಧ್ಯಾಹ್ನ ಹೃದಯಾಘಾತದಿಂದ ಬೆಂಗಳೂರಿನ ಅಪೋಲೋ ಅಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಹಿರಿಯ ನಟ ಅರ್ಜುನ್ ಸರ್ಜಾ ಸೋದರಳಿಯ ಆಗಿದ್ದ ಚಿರಂಜೀವಿ ಸರ್ಜಾ, ನಟಿ ಮೇಘನಾ ರಾಜ್ ಅವರನ್ನು ಎರಡೂವರೆ ವರ್ಷದ ಹಿಂದಷ್ಟೇ ಮದುವೆ ಆಗಿದ್ದರು.‌

ಬೆಂಗಳೂರಿನಲ್ಲಿ_1980 ಏಪ್ರಿಲ್ 7 ರಂದು ಜನಿಸಿದ್ದ ಚಿರಂಜೀವಿ ಸರ್ಜಾ ಬಾಲ್ಡ್ ವಿನ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಜಯ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ್ದರು.

ಮಾವ ಅರ್ಜುನ್ ಸರ್ಜಾ ಅವರ ಬಳಿ ನಾಲ್ಕು ವರ್ಷ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. 2009ರಲ್ಲಿ ವಾಯುಪುತ್ರ ಸಿನಿಮಾ ಮೂಲಕ ನಾಯಕನಾಗಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು

ಚಿರಂಜೀವಿ ಸರ್ಜಾ ನಿಧನಕ್ಕೆ ಇಡೀ ಸ್ಯಾಂಡಲ್ ವುಡ್ ಶಾಕ್ ನಲ್ಲಿ ಮುಳುಗಿದೆ. ಕಂಬನಿ‌ ಮಿಡಿದಿದೆ.

ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾಗಳು
ಅಜಿತ್, ವಾಯುಪುತ್ರ, ಸಂಹಾರ, ಗಂಡೆದೆ, ದಂಡಂ ದಶಗುಣಂ, ವರದಾನಾಯಕ,ವಿಶಿಲ್, ರುದ್ರ ತಾಂಡವ, ರಾಮಲೀಲ,ಆಕೆ, ಸೀಜರ್, ಅಮ್ಮ ಐ ಲವ್ ಯೂ,ಆದ್ಯಾ, ಖಾಕಿ, ಶಿವಾರ್ಜುನ.

ರಿಲೀಸ್ ಆಗಬೇಕಿದ್ದ ಸಿನಿಮಾಗಳು
ರಾಜ ಮಾರ್ತಾಂಡ,ಎಪ್ರಿಲ್,ರಣಂ, ಕ್ಷತ್ರಿಯ

LEAVE A REPLY

Please enter your comment!
Please enter your name here