ಫಲ ಕೊಡುತ್ತಿದೆ ಫಾಸ್ಟ್‌ಟ್ಯಾಗ್‌ – ಸಂಗ್ರಹ ಆಗಿದ್ದೆಷ್ಟು ಟೋಲ್‌..?

ಡಿಸೆಂಬರ್‌ನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜಾರಿಗೊಳಿಸಿರುವ ಫಾಸ್ಟ್‌ಟ್ಯಾಗ್‌ ಯಶಸ್ವಿ ಆಗಿದೆ. 2019 ರ ಕೊನೆಯ ತಿಂಗಳವೊಂದರಲ್ಲೇ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್‌ ಮೂಲಕ ಸಂಗ್ರಹಗೊಂಡಿರುವ ಹೆದ್ದಾರಿ ಸುಂಕ ಬರೋಬ್ಬರೀ 1,256 ಕೋಟಿ ರೂಪಾಯಿ.

ನವೆಂಬರ್‌ ತಿಂಗಳಲ್ಲಿ ಕೇವಲ 774  ಕೋಟಿ ರೂಪಾಯಿ ಫಾಸ್ಟ್‌ಟ್ಯಾಗ್‌ ಮೂಲಕ ಸಂಗ್ರಹಗೊಂಡಿತ್ತು. ಅಂದ್ರೆ ಒಂದೇ ತಿಂಗಳಲ್ಲಿ 482 ಕೋಟಿ ರೂಪಾಯಿ ಹೆಚ್ಚಳ ಕಂಡಿದೆ.

ಡಿಸೆಂಬರ್‌ನಲ್ಲಿ 6.4  ಕೋಟಿ ಬಾರಿ ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್‌ ಸಂಗ್ರಹಗೊಂಡಿದ್ದರೆ ಈ ಪ್ರಮಾಣ ನವೆಂಬರ್‌ನಲ್ಲಿ 3.4 ರಷ್ಟಿತ್ತು. ಅಕ್ಟೋಬರ್‌ನಲ್ಲಿ 3.1 ಕೋಟಿ ಫಾಸ್ಟ್‌ಟ್ಯಾಗ್‌ ವರ್ಗಾವಣೆ ಮೂಲಕ 703 ಕೋಟಿ ರೂಪಾಯಿ ಸಂಗ್ರಹ ಆಗಿತ್ತು.

ಜನವರಿ 15 ರ ಬಳಿಕ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್‌ಗಳಲ್ಲಿರುವ ಎಲ್ಲಾ ಲೇನ್‌ಗಳಲ್ಲೂ ಫಾಸ್ಟ್‌ಟ್ಯಾಗ್‌ ಮೂಲಕವೇ ಸುಂಕ ಕಟ್ಟಬಹುದು. ಇಲ್ಲವಾದಲ್ಲಿ ಟೋಲ್‌ ಎರಡು ಪಟ್ಟನ್ನು ದಂಡವಾಗಿ ಕಟ್ಟಬೇಕಿದೆ. ಡಿಸೆಂಬರ್‌ 15 ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಟೋಲ್‌ಗಳ ಲೇನ್‌ಗಳ ಪೈಕಿ ಶೇಕಡಾ 25 ಕ್ಕಿಂತ ಕಡಿಮೆ ಲೇನ್‌ಗಳಲ್ಲಿ (4 ಲೇನ್‌ಗಳಿದ್ದರೆ 1ರಲ್ಲಿ ಮಾತ್ರ) ಟೋಲ್‌ ಸಂಗ್ರಹಕ್ಕೆ ಅವಕಾಶ ಮಾಡಿಕೊಟ್ಟು ಕಡ್ಡಾಯ ಫಾಸ್ಟ್‌ಟ್ಯಾಗ್‌ ಜಾರಿ ವಿನಾಯಿತಿಯನ್ನು ಜನವರಿ 15 ರವರೆಗೆ ವಿಸ್ತರಿಸಿತ್ತು.

LEAVE A REPLY

Please enter your comment!
Please enter your name here