ಫಲಕೊಟ್ಟ ಸಿದ್ದರಾಮಯ್ಯ ಸರ್ಕಾರದ ಯೋಜನೆ – ಕೆರೆಗಳಿಗೆ ಹರಿದ ನೀರು

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಜಾರಿಗೆ ತಂದಿದ್ದ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆ ತುಂಬಿಸುವ ಯೋಜನೆ ಫಲ ಕೊಟ್ಟಿದ್ದು, ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ನೀರು ಹರಿಸಲಾಗಿದೆ. ಎನ್‌ಹೆಚ್‌ ವ್ಯಾಲಿಯ ಯೋಜನೆ ಪೂರ್ಣಗೊಂಡು ಕೆರೆಗೆ ನೀರು ಹರಿದಿದೆ.

೯೦೦ ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಸೆಪ್ಟೆಂಬರ್‌ ೧೭, ೨೦೧೭ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರೆವೇರಿಸಿದ್ದರು.

ಹೆಬ್ಬಾಳ ನಾಗವಾರ ಸಂಸ್ಕರಿತ ತ್ಯಾಜ್ಯ ನೀರು ಯೋಜನೆಯ ಕಾಮಗಾರಿ ಪೂರ್ಣಗೊಂಡು ಇಂದು‌ ಬೆಂಗಳೂರಿನ ಬಾಗಲೂರು ಕೆರೆಯಿಂದ ಚಿಕ್ಕಬಳ್ಳಾಪುರ ಕಂದವಾರ ಕೆರೆಗೆ ನೀರು ಹರಿಸಲಾಗಿದೆ.

ಒಟ್ಟು ೧೧೪ ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿ ಮುಗಿದಿದೆ. ವರ್ಷಕ್ಕೆ ೨.೭೦ ಟಿಎಂಸಿಯಷ್ಟು ನೀರು ಕೆರೆಗಳಿಗೆ ಹರಿಯಲಿದೆ. ಕಂದವಾರ ಕೆರೆ ತುಂಬಿದ ಬಳಿಕ ಅಲ್ಲಿಂದ ಜಿಲ್ಲೆಯ ಉಳಿದ ೪೪ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕಂದವಾರ ಕೆರೆಯಲ್ಲಿ ಜಿಲ್ಲೆಯ ಇತರೆ ಕೆರೆಗಳಿಗೆ ನೀರು ಹರಿಸಲು ಬೃಹತ್ ಪಂಪ್ ಹೌಸ್ ನಿರ್ಮಿಸಲಾಗಿತ್ತು.

LEAVE A REPLY

Please enter your comment!
Please enter your name here