ಪ್ರೀತಿಯ ಮುಂದೆ ಸೋತ ಕಳ್ಳ..

ಚೆನ್ನೈ: ರಾಮಾಯಣ ಎಂಬ ಬೃಹತ್ ಖಂಡಕಾವ್ಯ ಬರೆದು ಜಗತ್‍ಪ್ರಸಿದ್ಧರಾದ ವಾಲ್ಮೀಕಿ ಮಹರ್ಷಿಯ ಕಥನ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ. ಪೂರ್ವಾಶ್ರಮದಲ್ಲಿ ದರೋಡೆಕೋರರಾಗಿದ್ದ ಅವರು ನಂತರ ವಾಲ್ಮೀಕಿ ಮಹರ್ಷಿಯಾಗಿ ಬದಲಾಗಿದ್ದರು. ಇದು ಅಂದಿನ ಕಥೆ.

ಈ ಆಧುನಿಕ ಕಾಲಘಟ್ಟದಲ್ಲೊಬ್ಬ ಕಳ್ಳ ತಾನು ಬದಲಾಗಿದ್ದೇನೆ ಎನ್ನುತ್ತಿದ್ದಾನೆ. 12 ವರ್ಷಗಳಿಂದ ಕಳ್ಳತನವನ್ನೇ ಉದ್ಯೋಗವಾಗಿರಿಸಿಕೊಂಡಿದ್ದ ಚೆನ್ನೈನ ಕಮಲ್‍ಕಣ್ಣನ್ ಪತ್ನಿಯ ಪ್ರೀತಿಗೆ ಮನಸೋತು ತನ್ನ ಮನಸ್ಸು ಬದಲಿಸಿದ್ದಾನೆ. ವೃತ್ತಿಯನ್ನು ಬದಲಿಸಲು ಮುಂದಾಗಿದ್ದಾನೆ.

ಪತ್ನಿ ಸಮೇತ ಚೆನ್ನೈನ ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿದ ಕಮಲ್‍ಕಣ್ಣನ್, ಇನ್ನು ಮೇಲೆ ತಾನು ಕಳ್ಳತನಕ್ಕೆ ಮುಂದಾಗುವುದಿಲ್ಲ.ಒಳ್ಳೆಯವಾಗಿ ಜೀವಿಸುತ್ತೇನೆ. ಒಬ್ಬರಿಗೂ ಹಾನಿ ಮಾಡಲ್ಲ. ನನ್ನನ್ನು ಮನುಷ್ಯನಂತೆ ನೋಡಿ. ಅನುಮಾನ ಪಡದಿರಿ ಎಂದು ಪ್ರಮಾಣ ಪತ್ರವನ್ನು ಪೊಲೀಸರಿಗೆ ಸಲ್ಲಿಸಿದ್ದಾನೆ.

30 ವರ್ಷದ ಕಮಲ್‍ಕಣ್ಣನ್ ವಿರುದ್ಧ ಚೆನ್ನೈ ಸೇರಿದಂತೆ ಹಲವೆಡೆ ಕಳ್ಳತನದ ಪ್ರಕರಣಗಳು ಪೆಂಡಿಂಗ್‍ನಲ್ಲಿವೆ. ಹೀಗಾಗಿ ಪೊಲೀಸರು ಕಮಲ್‍ಕಣ್ಣನ್ ಮನವಿಯನ್ನು ಸದ್ಯಕ್ಕೆ ಪುರಸ್ಕರಿಸಿಲ್ಲ.

LEAVE A REPLY

Please enter your comment!
Please enter your name here