ಪ್ರಿಪೇಯ್ಡ್‌ ಗ್ರಾಹಕರೇ ನಿಮ್ಮ ಗಮನಕ್ಕೆ !

ಡಿಸೆಂಬರ್‌ 1 ರಿಂದ ಮೊಬೈಲ್ ಕರೆ ಮತ್ತು ಡಾಟಾ ಪ್ಲಾನ್  ದರ  ಶೇಕಡಾ 30 ರಿಂದ ಶೇಕಡಾ 42 ರಷ್ಟು ಹೆಚ್ಚಿಸುವುದಾಗಿ ಭಾರತಿ ಏರ್ ಟೆಲ್, ವೋಡಾಫೋನ್- ಐಡಿಯಾ ಕಂಪೆನಿಗಳು ಪ್ರಕಟಿಸಿವೆ. ಕಳೆದ 4 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದರ ಹೆಚ್ಚಳವಾಗುತ್ತಿದೆ.

ಈಗಿನ ಪ್ಲಾನ್‌ ಗಳಿಗೆ ಹೋಲಿಸಿದರೆ ಹೊಸ ಪ್ಲಾನ್‌ ಗಳು ಶೇ.42 ರವರೆಗೆ ದುಬಾರಿಯಾಗಲಿವೆ.  ವೋಡಾಫೋನ್‌ ಗೆ ಹೋಲಿಸಿದರೆ  ಏರ್ ಟೆಲ್‌ ದರಗಳು ಸ್ವಲ್ಪ ಅಗ್ಗವಾಗಿರಲಿವೆ.

ಈ ಎರಡೂ ಕಂಪೆನಿಗಳ ಗ್ರಾಹಕರು ಒಂದು ತಿಂಗಳ ಅವಧಿಗೆ ಚಾಲ್ತಿಯಲ್ಲಿರಲು ಕನಿಷ್ಟ ರೂ 49 ಪಾವತಿಸಬೇಕಾಗುತ್ತದೆ.

ವೋಡಾಫೋನ್‌ ಗ್ರಾಹಕರು ಬೇರೆ ಕಂಪೆನಿಗಳ ಮೊಬೈಲ್ ನಂಬರ್ ಗೆ ಕಾಲ್‌ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಶುಲ್ಕ ತೆರಬೇಕಾಗುತ್ತದೆ.

ಇದೇ ರೀತಿ ಡಿಸೆಂಬರ್‌ 6ರಿಂದ ರಿಲಯನ್ಸ್‌ ಜಿಯೋ ಕೂಡ ತನ್ನ ಹೊಸ “ಆಲ್‌ ಇನ್‌ ಒನ್”‌ ಪ್ಲಾನ್‌ನಡಿ ಅನ್ ಲಿಮಿಟೆಡ್‌ ಮೊಬೈಲ್ ಕರೆ ಮತ್ತು ಡಾಟಾ ಪ್ಲಾನ್  ಸೌಲಭ್ಯ ತರಲಿದೆ.