ಪ್ರವಾಸಿಗರಿಂದ ಕೊರೋನಾ ಹರಡುವ ಭಯ.. ಮಳೆಯಲ್ಲೇ ಪ್ರತಿಭಟನೆ

ಸಂಡೇ ಲಾಕ್ ಡೌನ್ ದಿನ ಮಡಿಕೇರಿ ಹೋಂ‌ಸ್ಟೇ, ರೆಸಾರ್ಟ್ ಗಳಲ್ಲಿ ಕಾಲ ಕಳೆಯಲು ರಾತ್ರೋರಾತ್ರಿ ಕಾರುಗಳಲ್ಲಿ ಬಂದ ಜನ ಸ್ಥಳೀಯರ ಆಕ್ರೋಶಕ್ಕೆ ಗುರಿ ಆಗಿದ್ದಾರೆ. ಜಿಟಿ ಜಿಟಿ ಮಳೆ ಸುರಿಯುದ್ದರೂ ಸೋಮವಾರಪೇಟೆಯ ಬೆಟ್ಟದಹಳ್ಳಿ ಬಳಿ ರಸ್ತೆಗೆ ಬಂದು ಕಾರ್ ಗಳಿಗೆ ಅಡ್ಡ ಹಾಕಿ ಪ್ರತಿಭಟನೆ ನಡೆಸಿರುವ ಸ್ಥಳೀಯರು ಕೂಡಲೇ ವಾಪಸ್ ಹೋಗುವಂತೆ ಆಗ್ರಹಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಹಬದಿಗೆ ತರುವ ಪ್ರಯತ್ನ ಮಾಡಿದ್ದಾರೆ. ದೂರದೂರುಗಳಿಂದ ಪ್ರವಾಸಿಗರು ಪರದಾಡುವ ಸ್ಥಿತಿ ಏರ್ಪಟ್ಟಿದೆ.

LEAVE A REPLY

Please enter your comment!
Please enter your name here