ಪ್ರಯಾಣಿಕರೇ ಗಮನಿಸಿ.. ರಾಜ್ಯದಲ್ಲಿ ಈ ರೈಲು ಮಾತ್ರ ಸಂಚರಿಸಲಿವೆ..

ಜೂನ್ ಒಂದರಿಂದ ದೇಶಾದ್ಯಂತ 200 ರೈಲುಗಳು ಸಂಚರಿಸಲಿದ್ದು, ಜನಜೀವನ ಬಹುತೇಕ ಸಹಜ ಸ್ಥಿತಿಗೆ ಮರಳಲಿದೆ. ರೈಲ್ವೇ ಇಲಾಖೆ ಕಳೆದ ರಾತ್ರಿ, ಯಾವ ಯಾವ ರೈಲುಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂಬ ಮಾಹಿತಿಯನ್ನು ಪ್ರಕಟಿಸಿದೆ. ಪ್ರಯಾಣಿಕರ ಅಗತ್ಯ, ಬೇಡಿಕೆ, ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ 200 ರೈಲುಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪಟ್ಟಿಯಲ್ಲಿ ರಾಜ್ಯದಲ್ಲಿ ಸಂಚರಿಸುವ ಆರು ರೈಲುಗಳಿವೆ.

ರಾಜ್ಯದಲ್ಲಿ ಸಂಚರಿಸುವ ರೈಲುಗಳ ಮಾಹಿತಿ ಈ ಕೆಳಗಿನಂತಿದೆ.
* ಮುಂಬೈ – ಬೆಂಗಳೂರು ಕೆಎಸ್‍ಆರ್ ನಡುವೆ ಸಂಚರಿಸುವ ಉದ್ಯಾನ್ ಎಕ್ಸ್‍ಪ್ರೆಸ್
* ದನಾಪುರ – ಬೆಂಗಳೂರು ಕೆಎಸ್‍ಆರ್ ನಡುವೆ ಸಂಚರಿಸುವ ಸಂಘಮಿತ್ರ ಎಕ್ಸ್‍ಪ್ರೆಸ್
* ನವದೆಹಲಿ – ಯಶವಂತಪುರ ನಡುವೆ ಸಂರಿಸುವ ಸಂಪರ್ಕ ಕ್ರಾಂತಿ ಎಕ್ಸ್‍ಪ್ರೆಸ್

ದುರಂತೋ ಎಕ್ಸ್‍ಪ್ರೆಸ್ ನಾನ್ ಎಸಿ ಬೋಗಿಗಳ ರೈಲು
* ಹೌರಾ – ಯಶವಂತಪುರ – ದುರಂತೋ ಎಕ್ಸ್‍ಪ್ರೆಸ್

ಜನ್‍ಶತಾಬ್ದಿ ರೈಲುಗಳ ವಿವರ
* ಬೆಂಗಳೂರು – ಹುಬ್ಬಳ್ಳಿ
* ಯಶವಂತಪುರ – ಶಿವಮೊಗ್ಗ

* ಎರ್ನಾಕುಲಂ – ನಿಜಾಮುದ್ದೀನ್ ನಡುವೆ ಸಂಚರಿಸುವ ಮಂಗಳ ಎಕ್ಸ್‍ಪ್ರೆಸ್ ರೈಲು ಮಂಗಳೂರು, ಉಡುಪಿ, ಕುಂದಾಪುರ, ಭಟ್ಕಳ, ಕಾರವಾರ ನಿಲ್ದಾಣಗಳ ಮೂಲಕ ಹಾದು ಹೋಗಲಿದೆ

ಇಂದಿನಿಂದ ರೈಲು ಟಿಕೆಟ್ ಬುಕಿಂಗ್ ಶುರುವಾಗಿದೆ. ಸ್ಲೀಪರ್ ಬೋಗಿಗಳ ರಿಸರ್ವೇಶನ್ ಮುಗಿದ ಬಳಿಕ 200ರವರೆಗೂ ವೇಯ್ಟಿಂಗ್ ಲಿಸ್ಟ್ ಟಿಕೆಟ್ ನೀಡಲಾಗುತ್ತದೆ.

ಈ ರೈಲುಗಳ ಸಮಯ,ನಿಲುಗಡೆ ಈ ಹಿಂದಿನಂತೆಯೇ ಇರಲಿದೆ. ಜನೆರಲ್ ಬೋಗಿಗಳಲ್ಲಿನ ಪ್ರಯಾಣಕ್ಕೆ ಸೀಟಿಂಗ್ ಬೋಗಿಗಳಲ್ಲಿ ಸಂಚರಿಸುವುದಕ್ಕೆ ತೆಗೆದುಕೊಳ್ಳುವ ದರವನ್ನು ನಿಗದಿ ಮಾಡಲಾಗಿದೆ.

ತತ್ಕಾಲ್, ಪ್ರೀಮಿಯಂ ತತ್ಕಾಲ್ ಸೌಲಭ್ಯ ಇರಲ್ಲ. 30 ದಿನಗಳ ಮೊದಲೇ ಟಿಕೆಟ್ ಕಾಯ್ದಿರಿಸಬಹುದು.

LEAVE A REPLY

Please enter your comment!
Please enter your name here