ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಗುಡ್​ ನ್ಯೂಸ್​..!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಬಿಎಂಆರ್‌ಸಿಎಲ್‌ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ಮೆಟ್ರೋ ರೈಲಿನಲ್ಲಿ ಇಂದಿನಿಂದ  ಒಟ್ಟು 18 ಆರು ಬೋಗಿಯ ಟ್ರೈನ್ ಗಳು ಸಂಚಾರ ನಡೆಸಲಿವೆ.

ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬಿಎಂಆರ್‌ಸಿಎಲ್‌ 3 ಬೋಗಿಗಳ ಎರಡು ಟ್ರೈನ್​ಗಳನ್ನು 6 ಬೋಗಿಗಳಾಗಿ ಪರಿವರ್ತಿಸಿ ಡಬಲ್‌ ಧಮಾಕ ನೀಡಿದೆ.

ಇಂದಿನಿಂದ ಹಸಿರು ಮಾರ್ಗದಲ್ಲಿ ಅಂದರೆ ಯಲಚೇನಹಳ್ಳಿಯಿಂದ ನಾಗಸಂದ್ರ ಮಾರ್ಗದಲ್ಲಿ ಹೆಚ್ಚುವರಿ ಎರಡು 6 ಬೋಗಿಯ ಟ್ರೈನ್ ಗಳು  ಸಂಚರಿಸಲಿವೆ.

ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಶೇ 97ರಷ್ಟು ಕಾರ್ಯಾಚರಣೆ 6 ಬೋಗಿಗಳಲ್ಲಿ ನಡೆಸಲು ಬಿಎಂಆರ್​ಸಿಎಲ್ ನಿರ್ಧಾರ.

ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಮೆಟ್ರೋ ರೈಲುಗಳು ಸಂಚರಿಸಲಿವೆ. ಈ ಮೂಲಕ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌  ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ. 

LEAVE A REPLY

Please enter your comment!
Please enter your name here