ಪ್ರಧಾನಿ ಮೋದಿ ಸರ್ಕಾರ ಕೊಡುವ 90 ಸಾವಿರ ಕೋಟಿಗೆ ರಾಜ್ಯಗಳೇ ಶ್ಯೂರಿಟಿ – ವಿಶೇಷ ಪ್ಯಾಕೇಜ್‌ನ ರಿಯಾಲಿಟಿ

ಪ್ರಧಾನಿ ನರೇಂದ್ರ ಮೋದಿ ಹೇಳಿರುವ 20 ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್‌ನಲ್ಲಿ 6 ಲಕ್ಷ ಕೋಟಿ ರೂಪಾಯಿ ಮೊತ್ತದ ವಿವರಗಳು ಘೋಷಣೆ ಆಗಿವೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ.

ಈ ಘೋಷಣೆಯಲ್ಲಿ ಪ್ರಮುಖವಾಗಿ ಇರುವುದು ಮತ್ತು ಎರಡನೇ ದೊಡ್ಡ ಮೊತ್ತವಾಗಿ ಹಂಚಿಕೆ ಆಗಿರುವುದು 90 ಸಾವಿರ ಕೋಟಿ ರೂಪಾಯಿ. ಈ ದುಡ್ಡನ್ನು ಹಂಚಿಕೆ ಮಾಡಿರುವುದು ವಿದ್ಯುತ್‌ ಸರಬರಾಜು ಸಂಸ್ಥೆಗಳಿಗೆ ಅಂದರೆ ಎಸ್ಕಾಂಗಳಿಗೆ. ಉದಾಹರಣೆಗೆ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ ಹೀಗೆ.

ವಿಶೇಷ ಎಂದರೆ ಕೇಂದ್ರ ಸರ್ಕಾರ ಈ 90 ಸಾವಿರ ಕೋಟಿ ರೂಪಾಯಿಯನ್ನು ಕೊಡುತ್ತಿರುವುದು ರಾಜ್ಯಗಳ ಶ್ಯೂರಿಟಿ ಮೇಲೆ. ಆದರೆ ಎಸ್ಕಾಂಗಳು 90 ಸಾವಿರ ಕೋಟಿ ರೂಪಾಯಿಯಲ್ಲಿ ನೆರವನ್ನು ಪಡೆದುಕೊಳ್ಳಬೇಕಾದರೆ ತಮ್ಮ ತಮ್ಮ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ.

ವಿದ್ಯುತ್‌ ಸರಬರಾಜು ಕಂಪನಿಗಳು ವಿದ್ಯುತ್‌ ಉತ್ಪಾದನಾ ಕಂಪನಿಗಳಿಂದ ಖರೀದಿಸಿದ ವಿದ್ಯುತ್‌ಗೆ ಕೊಡಬೇಕಾಗಿರುವ ಬಾಕಿ ಪಾವತಿಗಾಗಿ ಕೇಂದ್ರ ಸರ್ಕಾರ 90 ಸಾವಿರ ಕೋಟಿ ರೂಪಾಯಿ ನೀಡುತ್ತಿದೆ. ಆದರೆ ಇದಕ್ಕೆ ರಾಜ್ಯ ಸರ್ಕಾರಗಳ ಗ್ಯಾರಂಟಿ ಅತ್ಯಗತ್ಯ.

ಎಸ್ಕಾಂಗಳಿಗೆ ಸಾರ್ವಜನಿಕ ವಲಯದ ವಿದ್ಯುತ್‌ ಉತ್ಪಾದನಾ ಕಂಪನಿಗಳು ರಿಬೇಟ್‌ ನೀಡಬೇಕೆಂದು ಕೇಂದ್ರ ಸರ್ಕಾರ ಹೇಳಿದ್ದು ಆ ರಿಬೇಟ್‌ನ ಲಾಭವನ್ನು ಕೈಗಾರಿಕೆಗಳಿಗೆ ವರ್ಗಾಯಿಸುವಂತೆ ಕೇಂದ್ರ ಸರ್ಕಾರ ಎಸ್ಕಾಂಗಳಿಗೆ ಸೂಚಿಸಿದೆ.

LEAVE A REPLY

Please enter your comment!
Please enter your name here